ಮೈಸೂರು, ಜೂ.01, 2019 : (www.justkannada.in news ) : ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಮಹಿಳಾ ಪ್ರಾಧ್ಯಾಪಕರೊಬ್ಬರ ವಿರುದ್ಧ ಹಣ ದುರುಪಯೋಗದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆಂತರಿಕ ವಿಚಾರಣೆ ನಡೆಸಲಾಗತ್ತಿದೆ.
ಎಂ.ಎಂ.ಸಿ ಯ ವೈದ್ಯಶಾಸ್ತ್ರ ( ಮೆಡಿಸಿನ್ ವಿಭಾಗ ) ಪ್ರಾಧ್ಯಾಪಕಿ ಡಾ. ಮಂಜುಳಾ ಎಂಬುವವರ ವಿರುದ್ಧವೇ ಆಂತರಿಕ ವಿಚಾರಣೆ ನಡೆಯುತ್ತಿರುವುದು.
ಜಸ್ಟ್ ಕನ್ನಡ ಡಾಟ್ ಇನ್ ಗೆ ಈ ವಿಷಯವನ್ನು ಸ್ಪಷ್ಟಪಡಿಸಿದ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ನಂಜರಾಜ, ಎಂ.ಎಂ.ಸಿಯ ಮಹಿಳಾ ಹಾಸ್ಟೆಲ್ ಗೆ ವಾರ್ಡನ್ ಆಗಿ ಡಾ. ಮಂಜುಳಾ ಅವರನ್ನು ನೇಮಕ ಮಾಡಲಾಗಿತ್ತು. ಈ ವೇಳೆ ದುರುಪಯೋಗದ ಆರೋಪ ಕೇಳಿ ಬಂದಿತು. ಆದ್ದರಿಂದ ಆರೋಪದ ಸತ್ಯಾಸತ್ಯತೆ ಅರಿಯಲು ಆಂತರಿಕ ಸಮಿತಿ ನೇಮಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಮಹಿಳಾ ಹಾಸ್ಟೆಲ್ ಡೀನ್ ಆದ ಬಳಿಕ ಡಾ.ಮಂಜುಳಾ ಅವರ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಕೆಲ ಲಕ್ಷಗಳಷ್ಟು ಹಣ ವರ್ಗಾವಣೆಗೊಂಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆ ತಿಳಿಯಲು ಇಂಟರ್ನಲ್ ಎನ್ ಕ್ವಯರಿ ನಡೆಸಲಾಗುತ್ತಿದೆ. ಸಮಿತಿ ವಿಚಾರಣೆ ಬಳಿಕ ದುರುಪಯೋಗ ಆರೋಪದ ಸತ್ಯ ಸಂಗತಿ ಹೊರ ಬರಲಿದೆ.
————-
Key words : mysore-medicle-college-MMC-internal-enquiry-deen