ಬೆಂಗಳೂರು, ಜ.20, 2022 : (www.justkannada.in news ) ಕೇಂದ್ರದ ಸರ್ಕಾರದ ಸಹಭಾಗಿತ್ವದೊಂದಿಗೆ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಬೆಳವಾಡಿ ಬಳಿ ನಿರ್ಮಾಣವಾಗಲಿರುವ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಅನುಷ್ಠಾನಗೊಳಿಸುವ ಸಂಬಂಧ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ಕ್ಲಸ್ಟರ್ ನ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಕೇಂದ್ರ ಸರ್ಕಾರದ ಸಹಭಾಗಿತ್ವದ ಈ ಮಹತ್ವಾಕಾಂಕ್ಷೆಯ ಈ ಯೋಜನೆ ಭೂಮಿಯ ಗೊಂದಲದಿಂದ ಸಾಕಷ್ಟು ವಿಳಂಬವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಮನ್ವಯದ ಕಾರಣ, ಪ್ರಸ್ತುತ ಈ ಯೋಜನೆ ಅನುಷ್ಠಾನಕ್ಕೆ ಇದ್ದ ಅಡ್ಡಿ ಆತಂಕಗಳು ಬಗೆಹರಿದಿವೆ ಎಂದರು.
ಕೇಂದ್ರ ಸರ್ಕಾರ ಈಗ ಮೊದಲ ಕಂತಿನ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಿಗಳು ಮತ್ತು ಕ್ಲಸ್ಟರ್ ನ ಸದಸ್ಯರು ಕಾರ್ಯಪ್ರವೃತರಾಗಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಸಚಿವರು ಸೂಚಿಸಿದರು.
ಈ ವೇಳೆ ಮೈಸೂರು ಸಂಸದರು , ಕೈಮಗ್ಗ ಅಭಿವೃದ್ಧಿ ಮತ್ತು ಜವಳಿ ಇಲಾಖೆ ಆಯುಕ್ತ ಕುಮಾರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
key words : Mysore-mega-silk-cluster-central-minister-shankar-patil-bangalore-meeting