ಮೈಸೂರಿನಲ್ಲಿ ಮಿನಿ ಲಾಕ್‌ ಡೌನ್ ಮಾಡಬೇಕಾಗುತ್ತದೆ- ಡಿಸಿ ರೋಹಿಣಿ ಸಿಂಧೂರಿ ಎಚ್ಚರಿಕೆ…

ಮೈಸೂರು,ಮಾರ್ಚ್,22,2021(www.justkannada.in): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಈ ನಡುವೆ ಮೈಸೂರಿನಲ್ಲಿ ಮಿನಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.jk

ಈ ಕುರಿತು ಮಾತನಾಡಿರುವ ಡಿಸಿ ರೋಹಿಣಿ ಸಿಂಧೂರಿ, ರಾಜ್ಯಕ್ಕೆ ಎರಡನೇ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್‌ ಲೈನ್ ಹೊರಡಿಸಿದೆ.  ಅದರ ಪ್ರಕರಾವೇ ನಾವು ಕ್ರಮ ಕೈಗೊಂಡಿದ್ದೇವೆ. 500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೆ ಕಾರಣಕ್ಕೆ ನಾವು ಎಲ್ಲ ಜಾತ್ರೆ, ಉತ್ಸವಗಳನ್ನ ರದ್ದು ಮಾಡಿದ್ದೇವೆ. ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ನಂಜನಗೂಡು ಜಾತ್ರೆಗೆ 500 ಮಂದಿ ಮಾತ್ರ ಭಾಗಿಯಾಗಲು ಅನುಮತಿ…

ಇನ್ನು ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗೋಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗು ಕಷ್ಟ ಆಗುತ್ತೆ. ಜಾತ್ರೆಯನ್ನ ಮುಂದಿನ ವರ್ಷ ಮಾಡಬಹುದು. ಆದ್ರೆ ಜೀವನ ಉಳಿಸಿಕೊಳ್ಳುದು ಮುಖ್ಯ ಆಗಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.Mysore- mini -lock down-DC- Rohini Sindhuri -Warning.

ಮೈಸೂರು ಅರಮನೆಯಲ್ಲಿ ಮತ್ತೆ RTPCR ಹಾಗೂ ಆಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಬಾವಲಿ ಗಡಿಯಲ್ಲಿ ಪ್ರತಿಯೋಬ್ಬರಿಗೂ RTPCR ಟೆಸ್ಟ್ ಕಡ್ಡಾಯವಾಗಿದೆ. ತರಕಾರಿ ವಾಹನ ಅಲ್ಲ, ಯಾವ ವಾಹನಕ್ಕೂ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ.ನಾವು ಮತ್ತೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಕೊರೋನಾ ಎಲ್ಲಿಂದ ಹರಡುತ್ತಿದೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಅಗತ್ಯಬಿದ್ದರೆ ಎಲ್ಲಿ ಸೋಂಕು ಹೆಚ್ಚಿದೆಯೂ ಅಲ್ಲಿ ಮಿನಿ ಲಾಕ್‌ ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

Key words: Mysore- mini -lock down-DC- Rohini Sindhuri -Warning.