ಮೈಸೂರು ಜಿಲ್ಲೆ: ನೆರೆ ಹಾನಿ, ಪರಿಹಾರ ಕುರಿತು ವಿವರ ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಆಗಸ್ಟ್,3,2024 (www.justkannada.in):  ಭಾರಿ ಮಳೆಯಿಂದಾಗಿ ನೆರೆ ಹಾವಳಿಯಿಂದ ಮೈಸೂರು ಜಿಲ್ಲೆಯಲ್ಲಿ 345 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಮೂರು ಹಸುಗಳು ಸತ್ತಿದ್ದು, ಒಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮಾಹಿತಿ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ವಿವರ ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ, ಕಳೆದ ತಿಂಗಳು ವಾಡಿಕೆಗಿಂತ 54% ಹೆಚ್ಚು ಮಳೆ ಆಗಿದೆ. ಈ ತಿಂಗಳು 75% ಹೆಚ್ಚು ಮಳೆ ಆಗಿದೆ. ವಯನಾಡಲ್ಲಿ ಹೆಚ್ಚು ಮಳೆ ಆದ್ದರಿಂದ ಕಬಿನಿಗೆ 80 ಸಾವಿರ ಕ್ಯೂಸೆಕ್ ನೀರು ಬಂದಿದೆ.  ನಾವು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೆವು. ಹೀಗಾಗಿ ತಗ್ಗು ಪ್ರದೇಶದಲ್ಲಿ ಇರುವ ಜನರ ರಕ್ಷಣೆ ಮಾಡುವ ಕೆಲಸ ಜಿಲ್ಲಾಡಳಿತ ಮಾಡಿದೆ. ಬೊಕ್ಕಹಳ್ಳಿಯಲ್ಲಿ ಮನೆಗೆ ನೀರು ನುಗ್ಗಿದ್ದರಿಂದ 215 ಜನರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದೇವೆ. ಈಗ ಕಾಳಜಿ ಕೇಂದ್ರದಲ್ಲಿ  ಆಶ್ರಯ ಪಡೆದಿದ್ದಾರೆ. ಇಲ್ಲಿಗೆ ಮುಖ್ಯಮಂತ್ರಿಗಳೇ ಬರಬೇಕಿತ್ತು. ಆದರೆ ಶಿರಾಡಿ ಘಾಟ್ ಗೆ ಹೋಗಬೇಕಾದ್ದರಿಂದ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ ಎಂದರು.

ಪ್ರವಾಹ ಬಂದಾಗ ಹಲವು ಗ್ರಾಮಗಳಿಗೆ ನೀರು ನುಗ್ಗುತ್ತದೆ. ನಾವೂ ಹಿಂದೆಯೆ ಇವುಗಳನ್ನ ಗುರುತು ಮಾಡಿಕೊಂಡಿದ್ದೇವೆ. ಈ ಪ್ರವಾಹದಿಂದ ಜಿಲ್ಲೆಯಲ್ಲಿ 345 ಮನೆಗಳು ಹಾನಿ ಆಗಿವೆ. ಮನೆಗಳಿಗೆ ಸಣ್ಣ ಡ್ಯಾಮೇಜ್ ಆಗಿದ್ರೆ 6 ಸಾವಿರ ಕೊಡ್ತುತ್ತಿದ್ದೇವೆ. ಪೂರ್ತಿ ಹಾನಿ ಆಗಿದ್ರೆ 1.25 ಲಕ್ಷ ಕೊಡ್ತಾ ಇದ್ದವು.  ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುತ್ತಿದೆ.  ಈಗ ಕ್ಯಾಬಿನೆಟ್ ನಲ್ಲಿ ಬೇರೆ ತೀರ್ಮಾನ ಮಾಡಿದ್ದೇವೆ. ಮನೆ ಡ್ಯಾಮೇಜ್ ಗೆ 6500 ಕೊಟ್ಟರೆ ಸಾಲಲ್ಲ. ಪೂರ್ತಿ ಹಾಳಾದರೆ 1.20 ಲಕ್ಷ ಕೂಡ ಸಾಲಲ್ಲ. ಹಾಗಾಗಿ ಹಣ ಜನರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಮುಖಾಂತರ ಮನೆ ಕೊಡೋಣ ಅಂತ ತೀರ್ಮಾನ ಮಾಡಿದ್ದೇವೆ. ಜಿಲ್ಲೆಯಲ್ಲಿ ಮೂರು ಹಸುಗಳು ಸತ್ತಿವೆ. ಒಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಉಳಿದಂತೆ ಎಲ್ಲ ರಕ್ಷಣೆ ಹಾಗೂ ಪುನರ್ವಸತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ‌ 220 ಶಾಲೆಗಳು ಡ್ಯಾಮೇಜ್ ಆಗಿವೆ. 60ರಿಂದ 70 ಅಂಗನವಾಡಿ ಹಾಳಾಗಿವೆ. 50 ಕಿ.ಗ್ರಾಮೀಣ ರಸ್ತೆ, 25 ಕಿಮೀ  ಮುಖ್ಯ ರಸ್ತೆ ಹಾಳಾಗಿವೆ. ಬೊಕ್ಕಹಳ್ಳಿ ಗ್ರಾಮಸ್ಥರು ಊರನ್ನು ಶಿಫ್ಟ್ ಮಾಡಿ ಕೊಡಿ ಅಂತ ಕೇಳಿದ್ದಾರೆ. ಆದರೇ ಊರನ್ನೆ ಶಿಫ್ಟ್ ಮಾಡುವಂತ ಪ್ರವಾಹ ಏನು ಆಗಲ್ಲ. 80 ಮನೆಗಳಿಗಷ್ಟೆ ಸಮಸ್ಯೆ ಆಗ್ತಾ ಇದೆ. ಜನರ ಮನವಿಗೆ ಜಾಗ ಸಿಗುತ್ತಾ ಎಂದು ಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ಅದನ್ನ ಗಮನದಲ್ಲಿಟ್ಟುಕೊಂಡು  ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.

ಬಿಜೆಪಿ ಜೆಡಿಎಸ್ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಜನ ಸಂಕಷ್ಟದಲ್ಲಿ ಇದ್ದಾರೆ. ಜನ ಜಾನವಾರುಗಳಿಗೆ ನಷ್ಟ ಆಗುತ್ತಾ ಇದೆ. ಪ್ರಜ್ಞೆ ಇರುವವರು ಜನರ ಕಷ್ಟದಲ್ಲಿ ಭಾಗಿ ಆಗಬೇಕು.ಅಲ್ಲಿ ವಿಷಯವೇ ಇಲ್ಲದೆ ಇರುವುದಕ್ಕೆ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವೆ ಇಲ್ಲ. ಇದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಜವಾಬ್ದಾರಿಯುತ್ತ ವಿರೋಧ ಪಕ್ಷ ಎನ್ನಬೇಕೋ ಬೇಜವಾಬ್ದಾರಿ ಎನ್ನಬೇಕೊ ಎಂದು ಕಿಡಿಕಾರಿದರು.

ಇಂದು ಬೆಳಿಗ್ಗೆ ಸಿಎಂ ಮನೆಯಲ್ಲಿ ದಿಢೀರ್ ಸಭೆ ನಡೆಸಿದ ವಿಚಾರ ಕುರಿತು ಮಾತನಾಡಿದ ಹೆಚ್.ಸಿ ಮಹದೇವಪ್ಪ, ಸಿಎಂ ಹಾಗೂ ಈ ಭಾಗದವರು ಭೇಟಿ ಆಗಿ ಬಹಳ ದಿನ ಆಗಿತ್ತು. ನೆರೆ ಇರುವುದರಿಂದ ಜನರ ನೆರವಿಗೆ ಹೋಗಿ ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕು ಅಂತ ಹೇಳಿದ್ದಾರೆ. ಸಭೆ ಸೇರಿದ ಮೇಲೆ ರಾಜಕೀಯ ಚರ್ಚೆ ಆಗೆ ಆಗುತ್ತೆ. ನೆರೆ, ಅಭಿವೃದ್ಧಿ, ರಾಜಕೀಯ, ವ್ಯಕ್ತಿಗತ ಚಾರಿತ್ರ ಹರಣ, ಒಬ್ಬರ ಮೇಲೆ ಕಪ್ಪು ಮಸಿ ಬಳಿಯೋದೆ ಹೀಗೆ ಎಲ್ಲ ವಿಚಾರಗಳೂ ಚರ್ಚೆ ಆಗಿವೆ ಎಂದರು.

ಸಿಎಂ ಸಿದ್ದರಾಮಯ್ಯ ಗುಂಡು ಕಲ್ಲು ಇದ್ದಾಗೆ ಇದಾರೆ.

ಸಿಎಂ ಸಿದ್ದರಾಮಯ್ಯ ಡಿಸ್ಟರ್ಬ್ ಆಗಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿದ ಹೆಚ್.ಸಿ ಮಹದೇವಪ್ಪ, ಸಿಎಂ ಗುಂಡು ಕಲ್ಲು ಇದ್ದಾಗೆ ಇದಾರೆ. ಸಿದ್ದರಾಮಯ್ಯ ಹೇಗೆ ಇದ್ರೋ ಹಾಗೆ ಇದ್ದಾರೆ ಎಂದರು.

Key words: Mysore,  Minister, HC Mahadevappa, flood, damage