ಮೈಸೂರು,ಜ,3,2019(www.justkannada.in): ಇಂದು ನಡೆದ ಕೆಡಿಪಿ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ 29 ಇಲಾಖಾ ಮುಖ್ಯಸ್ಥರು ಸೇರಿ ಅಧಿಕಾರಿಗಳ ಹಾಜರಾತಿ ಪಡೆದ ಸಚಿವ ಸೋಮಣ್ಣ, ಸಭೆ ಆರಂಭದಲ್ಲೇ ಅಧಿಕಾರಿಗಳ ಬೆವರಿಳಿಸಿದರು. ಶಾಲಾ ಶಿಕ್ಷಕರಂತೆ ಅಟೆಂಡೆನ್ಸ್ ಹಾಕಿ ಗೈರಾದ ಅಧಿಕಾರಿಗಳಿಗೆ ಕೂಡಲೇ ಹಾಜರಾಗುವಂತೆ ಗಡುವು ನೀಡಿದರು. ಇಲ್ಲದಿದ್ದರೆ ಮನೆಗೆ ಹೋಗುವಂತೆ ಸಭೆಯಲ್ಲಿ ಸೋಮಣ್ಣ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಾಲ ಅಭಿವೃದ್ಧಿ ಇಲಾಖೆ ಕಚೇರಿ ಮುಖ್ಯಸ್ಥ ವೆಂಕಟೇಶ್ ಗೈರಾಗಿದ್ದರು. ಸಂಬಂಧಿ ಸಾವಿನ ಹಿನ್ನಲೆ ವೆಂಕಟೇಶ್ ಬೇರೆಡೆ ತೆರಳಿದ್ದರು. ವೆಂಕಟೇಶ್ ಪರವಾಗಿ ಸಭೆಯಲ್ಲಿ ಎಇಇ ಮೋಹನ್ ಹಾಜರಾಗಿದ್ದರು. ಈ ವೇಳೆ ವೆಂಕಟೇಶ್ ಗೈರಿಗೆ ಕಾರಣ ಕೇಳಿದ ಸೋಮಣ್ಣ ವೆಂಕಟೇಶ್ ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಗೈರನ್ನ ಖಾತ್ರಿ ಪಡಿಸಿಕೊಂಡರು.
PWD ಅಧಿಕಾರಿಗಳನ್ನು ಕಳುಹಿಸಿಕೊಡಿ -ಸಚಿವ ಗೋವಿಂದ ಕಾರಜೋಳಗೆ ಕರೆ…
ಇದೇ ವೇಳೆ PWD ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ಡಿಸಿಎಂ ಗೋವಿಂದ ಕಾರಜೋಳಗೆ ಕರೆ ಮಾಡಿ ಸಚಿವ ಸೋಮಣ್ಣ ತಿಳಿಸಿದರು. ನಾನು ಕೆ.ಡಿ.ಪಿ ಸಭೆ ನಡೆಸುತ್ತಿದ್ದೇನೆ. ನಿಮ್ಮ ಇಲಾಖೆ ಅಧಿಕಾರಿಗಳು ಯಾರು ಇಲ್ಲ. ನಾನು ಸಭೆ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ ಸಚಿವ ಸೋಮಣ್ಣ. ಸಂಜೆ 6 ಗಂಟೆವರೆಗೂ ಸಭೆ ಮಾಡುತ್ತೇನೆ ಅಧಿಕಾರಿಗಳನ್ನು ಕಳುಹಿಸಿ. ನಾನು ಮೂರು ಬಾರಿ ಸಭೆ ಮುಂದೂಡಿದ್ದೇನೆ. ಸ್ಥಳಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಕುಳಿತರೇ ಹೇಗೆ ನಾನು ಸಭೆ ಮಾಡಲಿ. ನಾನು ಸಭೆ ಇಟ್ಟುಕೊಂಡ ದಿನವೆ ನೀವು ಸಭೆ ಇಟ್ಟುಕೊಂಡ್ರೆ ಹೇಗೆ.? ಕೇವಲ ಒಬ್ಬ ಸುಪರ್ಡೆಂಟ್ ಇಟ್ಟುಕೊಂಡು ಸಭೆ ಹೇಗೆ ಮಾಡೋದು ಎಂದು ಸಚಿವ ವಿ ಸೋಮಣ್ಣ ಕೇಳಿದರು.
ಇನ್ನು ಕೆಡಿಪಿ ಸಭೆಗೆ ಕೆ.ಆರ್ ನಗರ ಶಾಸಕ ಸಾ.ರಾಮಹೇಶ್ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಗೈರಾಗಿದ್ದರು.ಶಾಸಕರಾದ ಜಿ.ಟಿ ದೇವೇಗೌಡ, ಅನಿಲ್ ಚಿಕ್ಕಮಾದು ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ಕೆಡಿಪಿ ಸಭೆಗೆ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಹಾಜರಾಗಿದ್ದರು.
key words: mysore-Minister – Somanna- officer- KDP- meeting