ಮೈಸೂರು,ಸೆಪ್ಟಂಬರ್,12,2020(www.justkannada.in): ಪಾಪ ಸಿದ್ದರಾಮಯ್ಯ ಆಗಾಗ ಟ್ವೀಟ್ ಮಾಡದಿದ್ರೆ ಕಾಂಗ್ರೆಸ್ ನವರೇ ಅವರನ್ನು ಮರೆತು ಬಿಡ್ತಾರೆ. ಆ ಕಾರಣಕ್ಕೆ ಸಿದ್ದರಾಮಯ್ಯ ಆಗೊಂದು ಈಗೊಂದು ಟ್ವೀಟ್ ಮಾಡುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಕರ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಮಾಢುತ್ತಿರುವ‘ನಿದ್ದೆಯಿಂದ ಎದ್ದೇಳು ಸರ್ಕಾರ ಅಭಿಯಾನ’ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ನಿದ್ದೆಯಲ್ಲಿರುವವರು ನಾವಲ್ಲ. ಸಿದ್ದರಾಮಯ್ಯ ಇಷ್ಟು ದಿನ ಮಲಗಿದ್ದರು. ಯಡಿಯೂರಪ್ಪ vs ಸಿದ್ದರಾಮಯ್ಯ ದಿನಚರಿ ಜನರ ಮುಂದಿಡೋಣ. 5 ವರ್ಷದಲ್ಲಿ ಸಿದ್ದರಾಮಯ್ಯ ಮಾಡಿದ್ದು ಏನು.? ಯಡಿಯೂರಪ್ಪ ಕೋವಿಡ್ ಕಾಲದಲ್ಲಿ ಮಾಡುತ್ತಿರುವುದು ಏನು ? ಎಂಬುದು ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.
ಯಾರೋ ಬಂದು ತಿವಿದಾಗ ಟ್ವೀಟ್ ಮಾಡುವುದು ಸಿದ್ಧರಾಮಯ್ಯ ಅವರ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷದವರೇ ಇವರನ್ನು ಮರೆತು ಬಿಡ್ತಾರೆ ಅಂತ ಹೀಗೆ ಟ್ವೀಟ್ ಮಾಡ್ತಾರೆ ಟ್ವೀಟ್ ಮಾಡುವುದು ವಿರೋಧ ಪಕ್ಷದ ಕೆಲಸವಲ್ಲ. ಸಿದ್ದರಾಮಯ್ಯ ಎಲ್ಲಿ ಟೂರ್ ಮಾಡಿದ್ದಾರೆ ? ಟ್ಬೀಟ್ ಮಾಡುವುದಕ್ಕೆ ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಸವಲತ್ತು ಕೊಡಬೇಕಾ ? ಎಂದು ಸಚಿವ ಎಸ್ ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.
ಪಾಪ ಸಿದ್ದರಾಮಯ್ಯ ಆಗಾಗ ಟ್ವೀಟ್ ಮಾಡದಿದ್ದರೆ ಕಾಂಗ್ರೆಸ್‌ನವರೇ ಅವರನ್ನು ಮರೆತು ಬಿಡುತ್ತಾರೆ. ಆ ಕಾರಣಕ್ಕೆ ಆಗೊಂದು ಈಗೊಂದು ಟ್ವೀಟ್ ಮಾಡುತ್ತಾರೆ. ನಾನು ವಿರೋಧ ಪಕ್ಷದ ನಾಯಕ ಎಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ. ಏಕೆಂದರೇ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯಗೆ ಭಯ. ತನ್ನನ್ನು ಪಕ್ಷದವರೇ ಮರೆಯುತ್ತಾರೆ ಅನ್ನೋ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಸಿದ್ದು ಸರಣಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಜಮೀರ್ ಮೇಲಿನ ಆರೋಪ ಸುಳ್ಳು ಎಂದು ಹೇಳಲಿ
ಅಲ್ಪಸಂಖ್ಯಾತ ಶಾಸಕ ಎಂದು ನನ್ನನ್ನು ಟಾರ್ಗೆಟ್ ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಜಮೀರ್‌ಗೆ ಗಿಲ್ಟ್ ಕಾಡುತ್ತಿರಬಹುದು. ಅದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ತಪ್ಪು ಮಾಡದಿದ್ದರೆ ಅಲ್ಪಸಂಖ್ಯಾತರ ಹೆಸರು ಏಕೆ ಬಳಸಬೇಕು. ಈ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಎಲ್ಲರಿಗೂ ಒಂದೇ ಕಾನೂನು ಅವರ ಮೇಲಿನ ಆರೋಪ ಸುಳ್ಳು ಎಂದು ಹೇಳಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡಬಾರದು ಎಂದು ಚಾಟಿ ಬೀಸಿದರು.
ಆಡಿದ ಮಾತಿಗೆ ನಡೆದುಕೊಳ್ಳುವರು ಇದ್ದಾರೆ. ಆದ್ರೆ ಇವರು ಆಡಿದ ಮಾತಿನಂತೆ ನಡ್ಕೊತಾರಾ .? ಸರ್ಕಾರ ಇಲ್ಲಿ ಯಾರನ್ನು ರಕ್ಷಣೆಯೂ ಮಾಡುತ್ತಿಲ್ಲ. ಯಾರನ್ನು ಟಾರ್ಗೆಟ್ ಸಹಾ ಮಾಡುತ್ತಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.
Key words: mysore-minister- st somashekar-former cm-siddaramaiah-tweet