ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸುಳಿವು ನೀಡಿದ ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಏಪ್ರಿಲ್,28,2021(www.justkannada.in): ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕೆ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು ಈ ಮಧ್ಯೆ ಮತ್ತೊಂದು ವಾರ ಲಾಕ್ ಡೌನ್ ಬಗ್ಗೆ ಸಹಕಾರ ಸಚಿವ ಎಸ್.ಟಿ‌.ಸೋಮಶೇಖರ್ ಸುಳಿವು ನೀಡಿದ್ದಾರೆ.jk

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಲಾಕ್ ಡೌನ್ ಮುಂದುವರಿಕೆ ಅನಿವಾರ್ಯ ಆಗಬಹುದು. ತಜ್ಞರ ಸಲಹೆ ಪ್ರಕಾರ ಸರ್ಕಾರ ಹದಿನಾಲ್ಕು ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ‌‌. ಚೈನ್ ಲಿಂಕ್ ಕಟ್ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ‌. ಜನರು ನಮಗೆ ಸಂಪೂರ್ಣ ಸಹಕಾರ ನೀಡಬೇಕು. ಜನರು ಸ್ಪಂದಿಸದೆ ಇದ್ರೆ ಮುಂದೆಯೂ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು  ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸುಳಿವು ನೀಡಿದರು.

ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, 6 ರಿಂದ‌ 10 ರವರೆಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅದಾದ ನಂತರ ಯಾರೇ ಬಂದರೂ ಕಠಿಣ ಕ್ರಮ ಜರುಗಿಸಿ. ಇಲ್ಲವಾದರೆ ಪೊಲೀಸರೇ ಇದಕ್ಕೆ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.

ವೆಂಟಿಲೇಟರ್ ಆಕ್ಸಿಜನ್ ರೆಮಿಡಿಸಿಯರ್ ಸಮಸ್ಯೆ ವಿಚಾರ: ಇಂದು ಸಂಜೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ

ಮೈಸೂರಿನಲ್ಲಿ ವೆಂಟಿಲೇಟರ್ ಆಕ್ಸಿಜನ್ ರೆಮಿಡಿಸಿಯರ್ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಇಂದು ಸಂಜೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. 100 ವೆಂಟಿಲೇಟರ್ 20 ಆಕ್ಸಿಜನ್ ಸಿಲಿಂಡರ್ 900ಕ್ಕೂ ಹೆಚ್ಚು ರೆಮಿಡಿಸಿವಿರ್ ಮೈಸೂರಿಗೆ ಬರುತ್ತಿದೆ ಎಂದು ಮಾಹಿತಿ ನೀಡಿದರು.

ರೆಮಿಡಿಸಿವಿರ್ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು. ಯಾರು ಮನವಿ ಸಲ್ಲಿಸಿದ್ದಾರೆ ಹಣ ಪಾವತಿ ಮಾಡಿದ್ದಾರೆ ಅವರಿಗೆ ಸರಬರಾಜು ಮಾಡಲಾಗುತ್ತದೆ. ಯಾರು ಬ್ಲ್ಯಾಕ್‌ ನಲ್ಲಿ ಅದನ್ನು ಖರೀದಿ ಮಾಡಬೇಡಿ. ಬ್ಲ್ಯಾಕ್‌ ನಲ್ಲಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ಕಟ್ಟು ನಿಟ್ಟಾಗಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಇದ್ದರೆ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.mysore-minister-st-somashekhar-hinted-continuation-lockdown

ಮೈಸೂರಿನಲ್ಲಿ ಪಾಸಿಟಿವ್ ಹಾಗೂ ಸಾವು ಪ್ರಕರಣ ಸಂಬಂಧ ಇದಕ್ಕೆ ಜನರು ಭಯಪಡಬೇಡಿ ಎಲ್ಲವೂ ನಿಯಂತ್ರಣದಲ್ಲಿದೆ. ಹೊರಗಿನಿಂದ ಕೊನೆ ಕ್ಷಣದಲ್ಲಿ ಸೋಂಕಿತರು ಆಗಮಿಸುತ್ತಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ಬೆಡ್ ಔಷಧಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ENGLISH SUMMARY…

Minister S.T. Somashekar hints on possibility of extension of lockdown
Mysuru, Apr. 28, 2021 (www.justkannada.in): The second wave of the COVID-19 Pandemic is spreading across the country at an alarming rate, as a result of which the State Government has imposed 14 days Janata Curfew in the state. In the meantime, Minister for Cooperation and Mysuru District In-charge Minister S.T. Somashekar today hinted at the possibility of extension of the lockdown.
Speaking in Mysuru today the Minister S.T. Somashekar explained that extension of the lockdown might become inevitable. “The State Government has presently imposed 14 days lockdown across the state based on the opinion and advice of the technical committee to break the pandemic chain. People should cooperate. If they won’t cooperate the lockdown may continue,” he said.mysore-minister-st-somashekhar-hinted-continuation-lockdown
Replying to a question on the scarcity of ventilators, oxygen and Remdesivir injections in Mysuru, the Minister explained everything will be set right soon as Mysuru will shortly be receiving 100 ventilators, 20 oxygen cylinders, and more than 900 Remdesivir Injections.
Keywords: Minister S.T. Somashekar/ possibility/ of extension of lockdown/ hint

Key words: mysore-Minister- ST Somashekhar-hinted – continuation – lockdown