ಮೈಸೂರು,ಮೇ,29,2020(www.justkannada.in): ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಸಭೆ ನಡೆದಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಈಗ ಏನಿದ್ದರೂ ಕೊರೊನಾ ವಿರುದ್ದದ ಹೋರಾಟ. ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸಿಎಂಗೆ ಬಿಟ್ಟ ವಿಚಾರ. ಪರಿಷತ್ ಚುನಾವಣೆ ಇನ್ನು ಘೋಷಣೆಯಾಗಿಲ್ಲ. ಇನ್ನು ಆಪರೇಷನ್ ಹಸ್ತ ವಿಚಾರ. ಈಗ ಆಪರೇಷನ್ ಕೊರೊನಾ ಮಾಡಬೇಕಿದೆ. ಎಲ್ಲಾ ಪಕ್ಷದವರು ಕೊರೊನಾ ವಿರುದ್ದದ ಹೋರಾಟದತ್ತ ಗಮನಹರಿಸಬೇಕು. ತಮ್ಮ ಸಮಯವನ್ನು ಅದಕ್ಕೇ ಮೀಸಲಿಡಬೇಕು ಎಂದು ಕರೆ ನೀಡಿದರು.
ಮಕ್ಕಳ ಆನ್ಲೈನ್ ಕ್ಲಾಸ್ಗೆ ತಿಲಾಂಜಲಿ ಇಟ್ಟ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್….
ಮಕ್ಕಳ ಆನ್ಲೈನ್ ಕ್ಲಾಸ್ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಈ ಬಗ್ಗೆ ಮಾನಸಿಕ ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ನಿಮ್ಹಾನ್ಸ್ ವೈದ್ಯರಿಂದ ಸಂಪೂರ್ಣ ವರದಿ 6 ವರ್ಷದ ಮಕ್ಕಳವರೆಗೆ ಆನ್ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಅವರ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಶೈಕ್ಷಣಿಕ ವರ್ಷದ ಆರಂಭ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇಕಡಾ 90ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ. ಹೀಗಾಗಿ ಕೇಂದ್ರದ ಮಾರ್ಗದರ್ಶಿ ಬಂದ ನಂತರ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಫ್ಲೈ ಓವರ್ಗೆ ಸಾವರ್ಕರ್ ಹೆಸರು: ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಫ್ಲೈ ಓವರ್ಗೆ ಸಾವರ್ಕರ್ ಹೆಸರು ವಿಚಾರ ಸಂಬಂಧ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಗೆ ವಿರೋಧಕ್ಕೆ ಮಣಿದಿಲ್ಲ. ಲಾಕ್ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿವಾಗಿ ಮುಂದೂಡಿದ್ದೇವೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಮಾಡಿ 11 ಗಂಟೆಗೆ ಅರೆಸ್ಟ್ ಆಗಿ 12 ಗಂಟೆಗೆ ಬಿಡುಗಡೆಯಾಗಿ ಬಂದವರಿಗೆ ಸಾವರ್ಕರ್ ಪ್ರತಿಭಟನೆ ಬಗ್ಗೆ ಏನು ಗೊತ್ತು ? ಎಂದು ಸಚಿವ ಸುರೇಶ್ ಕುಮಾರ್ ಫ್ಲೈ ಓವರ್ಗೆ ಸಾವರ್ಕರ್ ಹೆಸರು ನಾಮಕರಣ ಮಾಡಲು ವಿರೋಧಿಸುವವರಿಗೆ ಚಾಟಿ ಬೀಸಿದರು.
Key words: mysore- minister- suresh kumar-BJP-MLAs- meeting