ಮೈಸೂರು,ಸೆ,19,2019(www.justkannada.in): ದಸರಾ ಕಾರ್ಯಕ್ರಮಗಳ ಸಿದ್ಧತೆಗಳ ಬಗ್ಗೆ ವೀಕ್ಷಣೆ ಮಾಡುತ್ತಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಬಿಡುವಿನ ವೇಳೆಯಲ್ಲಿ ತಮ್ಮ ಬಹುಕಾಲದ ಆಪ್ತರಾದ ನಟ ಜಗ್ಗೇಶ್ ರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಸದ್ಯ ನಟ ಜಗ್ಗೇಶ್ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಸಚಿವ ವಿ.ಸೋಮಣ್ಣ ಬ್ಯುಸಿ ಷೆಡ್ಯೂಲ್ ನಲ್ಲಿದ್ದರೂ ತಮ್ಮ ಆಪ್ತ ನಟ ಜಗ್ಗೇಶ್ ರನ್ನ ಭೇಟಿ ಮಾಡಿದರು. ಈ ವೇಳೇ ಇಬ್ಬರು ಪರಸ್ಪರ ಉಪಯ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ನಟ ಜಗ್ಗೇಶ್ ಅವರಿಗೆ ಸಚಿವ ವಿ.ಸೋಮಣ್ಣ ದಸರಾ ಕಾರ್ಯಕ್ರಮಗಳಿಗೂ ಆಧಾರದ ಸ್ವಾಗತ ಕೋರಿದರು.
ಈ ಸಮಯದಲ್ಲಿ ಮಾತನಾಡಿದ ವಿ.ಸೋಮಣ್ಣ, ಜಗ್ಗೇಶ್ ನನ್ನ ಸಹೋದರ, ಎಲ್ಲಕ್ಕಿಂತ ದೈವಭಕ್ತ, ಒಳ್ಳೆಯ ಸಹೃದಯಿ, ನಾ ಕಂಡ ನಟರಲ್ಲಿ ಬಹಳ ಹತ್ತಿರದ ಸ್ನೇಹಿತ ಎಂದರು.
ಈ ಬಳಿಕ ಮಾತಯನಾಡಿದ ನಟ ಜಗ್ಗೇಶ್, ಸೋಮಣ್ಣ ಅವರ ಕೆಲಸದ ಉತ್ಸಾಹದಲ್ಲಿ lO % ರಷ್ಟು ಉತ್ಸಾಹ ನಂಗೆ ಬಂದ್ರೆ ಸಾಕು. ತಾಯಿ ಚಾಮುಂಡೇಶ್ವರಿಯ ದಸರಾ ಕಾರ್ಯ ನೆರೆವೇರಿಸೋದು ಎಷ್ಟೋ ಜನ್ಮದ ಪುಣ್ಯ. ಅದು ಸೋಮಣ್ಣ ಅವರಿಗೆ ಒದಗಿದೆ. ಎಲ್ಲರೂ ಮಂತ್ರಿ ಆಗ್ತಾರೆ, ಶಾಸಕರಾಗ್ತಾರೆ. ಆದ್ರೆ ಚಾಮುಂಡೇಶ್ವರಿಯ ಸೇವೆ ಮಾಡಲು ಕೆಲವರಿಗಷ್ಟೇ ಮಾತ್ರ ಅವಕಾಶ ಸಿಗತ್ತೆ. ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಸೋಮಣ್ಣ ಅವರಿಗೆ ಉಸ್ತುವಾರಿ ನೀಡಿದ್ದು ನಿಜಕ್ಕೂ ಅರ್ಥಪೂರ್ಣ ಎಂದು ಗುಣಗಾನ ಮಾಡಿದರು.
ಹಾಗೆಯೇ ತಾವು ಮಾಸ್ಕ್ ಧರಿಸಿ ಮೈಸೂರು ನಗರ ಸಂಚಾರ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ನಟ ಜಗ್ಗೇಶ್ , ನನಗೂ ಸಾಮಾನ್ಯರಂತೆ ಮೈಸೂರ ರಸ್ತೆಯಲ್ಲಿ ಓಡಾಡಬೇಕು ಅನ್ಸತ್ತೆ. ಆದ್ರೆ ಏನ್ ಮಾಡೋದು ಜನ ಏನೇನೋ ಬಿರುದು ಕೊಟ್ಟು ಮೇಲೆ ಕೂರಿಸಿದ್ದಾರೆ, ಹೀಗಾಗಿಯೇ ನೆನ್ನೆ ಮಾರುವೇಷದಲ್ಲಿ ಮೈಸೂರು ನಗರ ಸಂಚಾರ ಮಾಡಿದ್ದೆ ಎಂದು ತಿಳಿಸಿದರು.
Key words: Mysore- minister –V. Somanna- meet- actor- jaggesh