ಮೈಸೂರು,ಫೆ,15,2020(www.justkannada.in): ಶಾಹೀನ್ ಶಾಲೆ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನ ಖಂಡಿಸಿ ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಸಿದ್ಧರಾಮಯ್ಯರನ್ನ ವಶಕ್ಕೆ ಪಡೆದು ಬಸ್ ನಲ್ಲಿ ರವಾನಿಸಲಾಗಿತ್ತು.
ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ಹೋರಾಟಗಾರ ಅಂತ ಇವತ್ತು ಗೊತ್ತಾಯ್ತು. ಸಾಹಸ ಮಾಡಿ ಬಸ್ಸುಗಿಸ್ಸು ಹತ್ತಿದ್ದಾರೆ. ನಾನು 25 ವರ್ಷ ಅವರ ಜೊತೆ ಇದ್ದೆ. ಅವರು ಹೋರಾಟ ಮಾಡಿಕೊಂಡೇ ಇರಲಿ, ನಮಗೆ ಸಂತೋಷ ಎಂದು ನುಡಿದರು.
ಹಾಗೆಯೇ ಬಳ್ಳಾರಿಯ ಮರಿಯಮ್ಮನಹಳ್ಳಿ ಅಪಘಾತಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ವಿ.ಸೋಮಣ್ಣ, ನಿರಪರಾಧಿಯನ್ನು ಅಪರಾಧಿ ಎನ್ನುವುದು ಮಾಜಿ ಸಿಎಂ ಎನಿಸಿಕೊಂಡವರಿಗೆ ಶೋಭೆ ತರುವುದಿಲ್ಲ. ಅಪಘಾತ ಪ್ರಕರಣದ ಬಗ್ಗೆ ಎಸ್ಪಿ ಸಮೇತ ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೂ ಸರ್ಕಾರ ತನಿಖಾ ತಂಡವನ್ನ ನೇಮಕ ಮಾಡಿದೆ. ತನಿಖೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಬಹಿರಂಗವಾಗುತ್ತೆ. ಸಚಿವರ ಮಕ್ಕಳನ್ನು ರಕ್ಷಿಸುವ ಪ್ರಶ್ನೆಯೆ ಇಲ್ಲಿ ಬರುವುದಿಲ್ಲ. ಆದರೆ ವಿನಾಕಾರಣ ನಿರಪರಾಧಿಯನ್ನು ಅಪರಾಧಿ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.
Key words: mysore-Minister-V.Somanna – Siddaramaiah -fighter