ಮೈಸೂರು,ಜ,3,2019(www.justkannada.in): ಪ್ರೋತ್ಸಹ ಧನ ಕೊಡಿಸುವಂತೆ ಮನವಿ ಮಾಡಿದ್ದಕ್ಕೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉತ್ತರ ನೀಡಿದ ಶಾಸಕ ಜಿ.ಟಿ ದೇವೇಗೌಡರ ವಿರುದ್ದ ರೈತರು ತಿರುಗಿಬಿದ್ದ ಘಟನೆ ನಡೆಯಿತು.
ಪವರ್ ಗ್ರಿಡ್ ಮಾರ್ಗ ಬದಲಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಜಿ.ಟಿ ದೇವೇಗೌಡರಿಗೆ ಹಾಲಿನ ಪ್ರೋತ್ಸಾಹಧನ ಕೊಡಿಸಿ ಎಂದು ರೈತರು ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಯಾಚೇಗೌಡನಹಳ್ಳಿಯ ಹಾಲು ಉತ್ಪಾದಕರ ಸಂಘಕ್ಕೆ ಪ್ರೋತ್ಸಹ ಹಣ ಬರಬೇಕಿದೆ. ಸುಮಾರು 18 ಲಕ್ಷ ಹಣ ಬರಬೇಕಿದ್ದು ಇದನ್ನ ಡಿಸಿಸಿ ಬ್ಯಾಂಕ್ ನಿಂದ ಕೊಡಿಸಿ ಎಂದು ರೈತರು ಮನವಿ ಮಾಡಿದರು. ಆದರೆ ಈ ವೇಳೆ ಇದಕ್ಕು ನನಗು ಸಂಬಂಧ ಇಲ್ಲ ಎಂದು ಸಚಿವ ಜಿ,ಟಿ ದೇವೇಗೌಡರು ಉತ್ತರಿಸಿದರು.
ಶಾಸಕ ಜಿ.ಟಿ ದೇವೇಗೌಡರ ಪ್ರತಿಕ್ರಿಯೆಗೆ ಗರಂ ಆದ ರೈತರು, ನಿಮ್ಮ ಮಗನೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ. ಆದ್ರೆ ಸಂಬಂಧ ಇಲ್ಲ ಅಂತಿರಾ. ಅಷ್ಟೇ ಅಲ್ಲದೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಕೇಳ್ತಿರೋದು ಎಂದು ರೈತರು ತರಾಟೆ ತೆಗೆದುಕೊಂಡರು. ಈ ವೇಳೆ ರೈತರ ಗದ್ದಲ ಹೆಚ್ಚಾಗುತ್ತಿದ್ದಂತೆ ಶಾಸಕ ಜಿ.ಟಿ ದೇವೇಗೌಡರು ಸ್ಥಳದಿಂದ ಕಾಲ್ಕಿತ್ತರು.
key words: mysore- MLA-GT Deve Gowda- farmer-protest