ಕುಮಾರಸ್ವಾಮಿ ಅವರೇ ಶಕುನಿ, ಮಂಥರೆ ಮಾತು ಕೇಳಬೇಡಿ- ಹೆಚ್.ಡಿಕೆ ವಿರುದ್ಧ ಗುಡುಗಿದ ಶಾಸಕ ಜಿ.ಟಿ ದೇವೇಗೌಡ…

ಮೈಸೂರು,ಮಾರ್ಚ್,15,2021(www.justkannada.in):  ಜೆಡಿಎಸ್ ನಲ್ಲಿ ದಳಪತಿಗಳ ನಡುವೆ ವಾಕ್ಸಮರ ಮುಂದುವರೆದಿದ್ದು ಇದೀಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ  ಜಿ. ಟಿ.ದೇವೇಗೌಡ ಗುಡುಗಿದ್ದಾರೆ.jk

ಚಾಮುಂಡಿಬೆಟ್ಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಿ,ಟಿ ದೇವೇಗೌಡರು, ಕುಮಾರಸ್ವಾಮಿ ಅವರೆ ಶಕುನಿ, ಮಂಥರೆ ಮಾತು ಕೇಳಬೇಡಿ ಎನ್ನುವ ಮೂಲಕ ಶಾಸಕ ಸಾ.ರಾ.ಮಹೇಶ್ ಹೆಸರು  ಹೇಳದೆ ಶಕುನಿ ಎಂದು ಕರೆದರು.

ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ. ಮಂದರೆ ರಾಮನ ಪಟ್ಟಾಭಿಷೇಕ ತಪ್ಪಿಸಿ ಕಾಡಿಗೆ ಕಳುಹಿಸಿದಳು. ನಾಟಕದಲ್ಲಿ ಹೇಳುವ ಈ ಪ್ರಸಂಗಗಳಂತೆ ನಡೆದುಕೊಳ್ಳಬೇಡಿ ಕುಮಾರಸ್ವಾಮಿ ಅವರೇ. ನೀವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅರ್ಥಪೂರ್ಣವಾಗಿ ತಿಳಿದುಕೊಳ್ಳಿ. ಅವರು ಹೇಳಿದ್ದನ್ನೇ ಕಾಪಿ, ಜರಾಕ್ಸ್ ಹೊಡೆಯಲು ಹೋಗಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ. ಅದಕ್ಕೆ ಕುಂದು ತರುವ ಮಾತು ಆಡಿಲ್ಲ ಎಂದು ಜಿ.ಟಿ ದೇವೇಗೌಡರು ಕಿಡಿಕಾರಿದರು.

ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ….

ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡರ ಬೇರು ತೆಗೆಯುತ್ತಿಲ್ಲ. ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಊರೂರಿಗೆ ಹೋಗಿ ಪ್ರಚಾರವನ್ನೂ ಮಾಡದೆ ಮನೆಯಲ್ಲಿ ಕುಳಿತಿದ್ದೇನೆ.  ನೀವು ತಾಲ್ಲೂಕುಗಳನ್ನು ಸುತ್ತುತ್ತಿದ್ದೀರಿ. ನನ್ನನ್ನು ನಾನು ಎಲ್ಲಿಯೂ ಆಲದಮರ ಅಂತ ಕರೆದುಕೊಂಡಿಲ್ಲ. ಆದ್ರೆ ನನ್ನ ವಿರುದ್ಧ ನೀವು ತಾಲೂಕುಗಳಿಗೆ ಹೋಗಿ ಮಾತನಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಸಂಕಷ್ಟ ಕಾಲದಲ್ಲೂ ಜೆಡಿಎಸ್‌ನಲ್ಲೇ ಉಳಿದುಕೊಂಡರು.  ಅವರ ಮಗನ ವಿರುದ್ಧ ನೀವು ಪ್ರಚಾರ ಮಾಡಿದ್ದೀರಿ. ಜೆಡಿಎಸ್ ಬದಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೀರಿ. ಕಾಂಗ್ರೆಸ್ ಮಾಜಿ ಶಾಸಕ ವೆಂಕಟೇಶ್ ಜತೆಗೆ ಮಾತನಾಡಿಕೊಂಡು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೀರಿ ಎಂದು ಜಿ.ಟಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ….

ಸಾ.ರಾ.ಮಹೇಶ್ ಛತ್ರಕ್ಕೆ ಬಂದು ನನ್ನನ್ನು ಜೆಡಿಎಸ್‌ನಿಂದ ಹೊರಗೆ ಹಾಕುತ್ತೇವೆ ಅಂತ ಹೇಳಿದ್ದೀರಿ.  ಪದೇ ಪದೇ ನನ್ನನ್ನು ಯಾಕೆ ಅವಮಾನ ಮಾಡುತ್ತೀರಿ. ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಾಲಿನಲ್ಲೇ ನನಗೆ ಖುರ್ಚಿ ಇದೆ. ನಾನು ಈಗಲೂ ಜೆಡಿಎಸ್ ಶಾಸಕರ ಜತೆಯಲ್ಲೇ ಕುಳಿತುಕೊಳ್ಳುತ್ತಿದ್ದೇನೆ.  ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್‌ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ ಎಂದು ಜಿ.ಟಿ ದೇವೇಗೌಡರು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಯಾರ್ಯಾರದ್ದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಮೈಮುಲ್ ಪ್ರಚಾರದ ವೇಳೆ  ಮೈಸೂರು ಹೈಕಮಾಂಡ್ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡ ಎನ್ನುವ ಆಲದ ಮರವನ್ನು ಬುಡಸಮೇತ ಕಿತ್ತುಹಾಕಿ ಹೊಸ ಗಿಡ ನೆಡುತ್ತೇವೆ ಅಂತ ಹೇಳಿದ್ದಾರೆ. ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಕೂಡ ನನ್ನ ವಿರುದ್ಧ ಮಾತನಾಡಿದ್ದಾರೆ.  ನಾನು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ನಾನು ಮನಸ್ಸು ಮಾಡಿದ್ದಾರೆ ಶಾಶ್ವತವಾಗಿ ಮೈಮುಲ್ ಅಧ್ಯಕ್ಷನಾಗಿರುತ್ತಿದ್ದೆ. ಯಾವ ಕಾಲದಲ್ಲೋ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತಿದ್ದೆ. ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಹಕಾರ ಕೊಡಲಿಲ್ಲ. ಸಾ.ರಾ.ಮಹೇಶ್ ಮಾತು ಕೇಳಿಕೊಂಡು ಪ್ರತಿಸ್ಪರ್ಧಿ ಚಂದ್ರಶೇಖರ್ ಪರವಾಗಿ ಮತಯಾಚನೆ ಮಾಡಿದರು. ಜನರ ಆಶೀರ್ವಾದದಿಂದ ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ.  ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯ ಮಾಡಲಿದೆ ಎಂದು  ಶಾಸಕ ಜಿ.ಟಿ.ದೇವೇಗೌಡ ಹೇಳಿದರು.mysore- mla-GT Devegowda-outrage-agianst- hd kumaraswamy

ಕುಮಾರಸ್ವಾಮಿ ಅವರೆ ಪದೇ ಪದೇ ಯಾಕೆ ನನ್ನ ಬಗ್ಗೆ ಮಾತನಾಡುತ್ತೀರಿ. ಯಾವಾಗಲು ಯಾಕೆ ನನ್ನ ಮಾನ ಮರ್ಯಾದೆ ತೆಗಿತಿದ್ದಿರಿ. ಅಂತಹದ್ದು ನಾನು ಏನು ಮಾಡಿದ್ದೇನೆ. ಏನ್ ಮಾಡಿದ್ದೀನಿ ಅಧಿಕೃತವಾಗಿ ಹೇಳಿ. ನ್ಯಾಯಾಲಯದಲ್ಲಿ ನೀವೇ ಕೇಸ್ ಹಾಕಿಸಿದ್ದೀರಿ. ಅದರ ತೀರ್ಪನ್ನ ನಾವು ಪಾಲನೆ ಮಾಡಿಕೊಂಡು ಹೋಗುತ್ತಿದ್ದೇವೆ. ನ್ಯಾಯಾಲಯದ ವಿರುದ್ಧವಾಗಿ ನೀವು ಮಾತನಾಡುತ್ತಿದ್ದೀರಿ ಎಂದು ಹೆಚ್.ಡಿಕೆ ವಿರುದ್ದ ಜಿ.ಟಿ ದೇವೇಗೌಡರು ಹರಿಹಾಯ್ದರು.

ENGLISH SUMMARY….

MLA GTD advices HDK to not to listen to the words of ‘Shakuni,’ ‘Mandare’
Mysuru, Mar.15, 2021 (www.justkannada.in): The war of words between JDS leaders has continued. It is now the turn of former Chief Minister H.D. Kumaraswamy and JDS MLA G.T.Devegowda.
Speaking to the media persons at Chamundi Hills in Mysuru today, MLA G.T. Devegowda said, “Kumaraswami please don’t listen to the words of ‘Shakuni,’ and ‘Mandare’. By mentioning the name of ‘Shakuni’, he meant MLA Sa. Ra. Mahesh.mysore- mla-GT Devegowda-outrage-agianst- hd kumaraswamy
“Shakuni spoilt the entire Kouravas by joining hands with them. ‘Mandare’ prevented the coronation of Rama and sent him to the forest. Hence, Kumaraswamy please don’t behave like the incidents that have taken place in the epic. You were the Chief Minister of the State for two terms. Please behave properly. Please don’t try to copy and xerox them. Your leadership has value, don’t lose it with your words,” he said.
Keywords: G.T. Devegowda/ JDS MLA/ H.D. Kumaraswamy/ war of words

Key words: mysore- mla-GT Devegowda-outrage-agianst- hd kumaraswamy