ಮೈಸೂರು,ಜನವರಿ ,25,2022(www.justkannada.in): ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ಸರ್ಕಾರದ ಅಮೃತ ಹೌಸಿಂಗ್ ಯೋಜನೆ ಅಡಿ ಅರ್ಹರಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ ರಾಮದಾಸ್ ಚಾಲನೆ ನೀಡಿದರು.
ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆಯಲ್ಲಿ ವಿದ್ಯಾರಣ್ಯಪುರಂ ಶಾಸಕ ರಾಮದಾಸ್ ಕಚೇರಿ ಬಳಿ ಕಾರ್ಯಕ್ರಮ ನೆರವೇರಿತು. ಫಲಾನುಭವಿಗಳ ಪಟ್ಟಿಯನ್ನು ವೆಬ್ ಸೈಟ್ ಮೂಲಕ ಪ್ರಕಟಿಸಲಾಯಿತು.
ಪ್ರವಾಸೋದ್ಯಮ ಗೈಡ್, ಬೀದಿ ಬದಿ ವ್ಯಾಪಾರಿ, ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿ, ಮಹಿಳಾ ಸೆಕ್ಸ್ ವರ್ಕರ್, ಮಾನಸಿಕ ವಿಶೇಷ ಚೇತನರು, ತೃತೀಯ ಲಿಂಗದವರಿಗೆ, ಕೋವಿಡ್ ನಿಂದ ಮೃತರಾದವರ ಕುಟುಂಬದವರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
Key words: mysore-MLA-SA Ramadas