ಮೈಸೂರು,ಮೇ,6,2021(www.justkannada.in): ಕೊರೋನಾ ಸೋಂಕು ತಗುಲಿ ಕ್ವಾರಂಟೈನ್ ನಲ್ಲಿದ್ದು ಇದೀಗ ಕೋವಿಡ್ ನಿಂದ ಗೆದ್ದು ಬಂದ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರಿಗೆ ಮೈಸೂರು ಮಹಾನಗರ ಪಾಲಿಕೆಯ ಸದಸ್ಯರು ಕಾಲಿಗೆ ಬಿದ್ದು ಗೌರವ ಸಲ್ಲಿಸಿದ ಘಟನೆ ನಡೆಯಿತು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಘಟನೆ ನಡೆದಿದೆ. ಇಂದು ಕೆ. ಆರ್.ಕ್ಷೇತ್ರದ ಕೋವಿಡ್ ಸಂಬಂಧ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಶಾಸಕ ಎಸ್. ಎ.ರಾಮ್ದಾಸ್ ಭಾಗಿಯಾದರು. ಈ ನಡುವೆ ಕೊರೊನಾ ಪಾಸಿಟಿವ್ ಆಗಿ 22 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ ಶಾಸಕ ರಾಮದಾಸ್ ಇಂದು ಕೊರೋನಾದಿಂದ ಗೆದ್ದು ಬಂದಿದ್ದು, ಈ ಹಿನ್ನೆಲೆಯಲ್ಲಿ, ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು ಸೇರಿ ಮೂವರ ಪಾಲಿಕೆ ಸದಸ್ಯರು ಶಾಸಕ ರಾಮದಾಸ್ ಕಾಲಿಗೆ ಬಿದ್ದು ಗೌರವ ಸಲ್ಲಿಸಿದರು.
ಸಭೆಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದ ವಿಷಯ ಹಂಚಿಕೊಂಡು ಭಾವುಕರಾದ ಶಾಸಕ ಎಸ್.ಎ ರಾಮದಾಸ್, ನೆನ್ನೆ ಸಂಜೆ ನನಗೆ ನೆಗಟಿವ್ ರಿಪೋರ್ಟ್ ಬಂತು. ಹೀಗಾಗಿ ಇಂದು ಸಭೆಗೆ ಹಾಜರಾದೆ. ಕಳೆದ 20 ದಿನಗಳಿಂದಲೂ ಹೊರಗೆ ಬರಲೇ ಇಲ್ಲ ಎಂದು 20 ದಿನಗಳ ಕ್ವಾರಂಟೈನ್ ದಿನಗಳನ್ನ ನೆನೆದರು.
ವಾರ್ಡಿನ ಯಾವುದೇ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ಗಂಟಲು ನೋವು ಇದ್ದಿದ್ದರಿಂದ ಒಂದು ಫೋನ್ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಿರ್ವಹಣೆಗಾಗಿ ಒಂದು ತಂಡ ನೇಮಿಸಿದ್ದೆ ಅವರು ಕಾರ್ಯನಿರತರಾಗಿದ್ದರು. ಮೈಸೂರಿನಲ್ಲಿ ಕೊರೊನ ಹೆಚ್ಚಾಗಿ ಹರಡುತ್ತಿದೆ. ಪಾಸಿಟಿವ್ ಬಂದವರು ಓಡಾಡುತ್ತಾರೆ. ಪಾಸಿಟಿವ್ ಬಂದ ವ್ಯಕ್ತಿಯ ಮನೆ ಮುಂದೆ ಬಿಳಿ ಬಾವುಟ ಹಾಕಬೇಕು.ಇದರಿಂದ ಬೇರೆ ಮನೆಯವರು ಎಚ್ಚರಿಕೆಯಿಂದಿರುತ್ತಾರೆ ಎಂದು ಶಾಸಕ ಎಸ್.ಎ ರಾಮದಾಸ್ ಸಲಹೆ ನೀಡಿದರು.
Key words: mysore-MLA-SA Ramadas-corona-negetive- mysore city corporation-member