ಮೈಸೂರು,ಮೇ,19,2021(www.justkannada.in): ಕೊರೋನಾ ಸೋಂಕಿತರಿಗಾಗಿ ಶೇ. 50ರಷ್ಟು ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎಸ್.ಎ ರಾಮದಾಸ್ ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದರೂ ವಾರ್ ರೂಂ ನಿಂದ ಕರೆ ಮಾಡಿದ್ರೆ ಬೆಡ್ ಫುಲ್ ಆಗಿವೆ ಎಂದು ಉತ್ತರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಕಡಿವಾಣ ಶಾಸಕ ಎಸ್ ಎ ರಾಮದಾಸ್ ಸಭೆ ನಡೆಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಅಮರ್ ನಾಥ್ ಸೇರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ನಡೆಗೆ ಕಿಡಿ ಕಾರಿದ ಶಾಸಕ ಎಸ್.ಎ ರಾಮದಾಸ್, ಶೇ. 50ರಷ್ಟು ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು.
ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಸ್.ಎ ರಾಮದಾಸ್ ನಿತ್ಯವೂ ಖಾಸಗಿ ಆಸ್ಪತ್ರೆಗಳ ಮಾನಿಟರಿಂಗ್ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸಭೆಯಲ್ಲಿ ಟಾಸ್ಕ್ ಫೋರ್ಸ್ ನ ಬೆಡ್ ಮ್ಯಾನೇಜ್ಮೆಂಟ್ ಜವಾಬ್ದಾರಿ ಹೊತ್ತಿರುವ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆಎಲ್ ಆರ್ ಅಧ್ಯಕ್ಷ ಅಪ್ಪಣ್ಣ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಾವು ಇಂದು ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇವು. ಭೇಟಿ ವೇಳೆ ಕೆಲವೊಂದು ಕಳ್ಳಾಟ ಬಯಲಿಗೆ ಬಂದಿದೆ. ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಲ್ಲದೆ 25 ಸರ್ಕಾರಿ ಆಕ್ಸಿಜನ್ ಬೆಡ್‌ನಲ್ಲಿ 13ಕ್ಕೆ ಆಕ್ಸಿಜನ್ ಇಲ್ಲ. ಹೊರಗೆ ದರ ಪಟ್ಟಿ ನಿಗಧಿ ಮಾಡುವಂತೆಯು ಸೂಚಿಸಲಾಗಿದೆ. ಆದರೆ ಇದ್ಯಾವುದನ್ನು ಸಹ ಖಾಸಗಿ ಆಸ್ಪತ್ರೆ ನಿರ್ವಹಣೆ ಮಾಡ್ತಿಲ್ಲ. ಇದನ್ನ ಖುದ್ದು ನಾವೇ ಪಿಪಿಇ ಕಿಟ್ ಧರಿಸಿ ಪರಿಶೀಲನೆ ನಡೆಸಿದ್ದೇವೆ. ನಮ್ಮ ಕಣ್ಣ ಮುಂದೆಯು ಸಾಕಷ್ಟು ಲೋಪದೋಷ ಕಂಡು ಬಂದಿದೆ. ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಡವರ ಬೆಡ್ ಮತ್ಯಾರಿಗೋ ಹೋಗುತ್ತಿದೆ. ಬಡವರು ವಾರ್ ರೂಂನಲ್ಲಿ ಬುಕ್ ಮಾಡಿದ ಬೆಡ್ ಮತ್ಯಾರಿಗೋ ಸೇರುತ್ತಿದೆ. ಇದು ಸಹ ನಮ್ಮ ಗಮನಕ್ಕೆ ಬಂದಿದೆ. ಇಂದು ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಕ್ರಮಕ್ಕೆ ಸೂಚಿಸಿದ್ದೇವೆ ಎಂದು ಹೆಚ್.ವಿ.ರಾಜೀವ್ ಹೇಳಿದರು.
Key words: mysore- MLA-SA Ramadas – instructed- action- against-private hospitals