ಮೈಸೂರು,ಫೆಬ್ರವರಿ,15,2021(www.justkannada.in): ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ಗುದ್ಧಲಿಪೂಜೆ ನೆರವೇರಿಸಿದರು.
ವಾರ್ಡ್ 64 ರ ಅರವಿಂದ ನಗರ ಭಾಗದಲ್ಲಿರುವ SBM ಬಡಾವಣೆಯ 31ನೇ ಬ್ಲಾಕ್ ನಲ್ಲಿ ನೂತನ ಬಾಕ್ಸ್ ಡ್ರೈನ್ ಮೋರಿ ಮತ್ತು ಡಕ್ ಗಳ 10 ಲಕ್ಷ ರೂಗಳ ಕಾಮಗಾರಿ ಹಾಗೂ 65 ನೆ ವಾರ್ಡ್ ನ ಶ್ರೀರಾಂಪುರ ಬಡಾವಣೆಯಲ್ಲಿ .ಬೆಮೆಲ್ ಗಣಪತಿ ದೇವಸ್ಥಾನದ ಆವರಣದಲ್ಲಿ 5 ಲಕ್ಷದ ದೇವಸ್ಥಾನದ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಹಾಗೂ ಬೆಮೆಲ್ ಗಣಪತಿ ದೇವಸ್ಥಾನದ ಹಿಂಭಾಗದ ರಸ್ತೆಯ 20 ಲಕ್ಷ ರೂ ಗಳ ಡಾoಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರುಗಳಾದ ಎಂ.ಗೀತಾಶ್ರೀ ಯೋಗಾನಂದ್, ಚಂಪಕ ಉಪಸ್ಥಿತರಿದ್ದರು..
ಇನ್ನು ಅಗ್ರಹಾರ ವಾರ್ಡ್ ನಂ. 51 ರ ವ್ಯಾಪ್ತಿಯ ವಿಶ್ವಮಾನವ ಉದ್ಯಾನವನ ಹಿಂಭಾಗ ಮೈಸೂರು – ಊಟಿ ರಸ್ತೆಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಶಾಸಕ ಎಸ್ ಎ ರಾಮದಾಸ್ ಗುದ್ದಲಿಪೂಜೆ ನೆರವೇರಿಸಿದರು.
ಮೈಸೂರು – ಊಟಿ ರಸ್ತೆ ಅಗಲೀಕರಣದೊಂದಿಗೆ ಕಳೆದ ವರ್ಷ ಲೋಕಾರ್ಪಣೆಗೊಂಡಿತ್ತು, ಅದರೆ ಈ ಸ್ಥಳದಲ್ಲಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರು,ಹೀಗಾಗಿ ಇಲ್ಲಿ ಬಸ್ ನಿಲ್ದಾಣ ಬೇಕೆಂದು ಬಹಳಷ್ಟು ಪ್ರಯಾಣಿಕರ ಬೇಡಿಕೆ ಬಹಳ ದಿನದಿಂದ ಇತ್ತು,
ಇದನ್ನು ಮನಗೊಂಡ ಸ್ಥಳೀಯ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ಬಸ್ ನಿಲ್ದಾಣದ ಕಾಮಗಾರಿಗೆ ಅನುದಾನದ ನಿರೀಕ್ಷೆಯಲ್ಲಿ ಇದ್ದರು, ಈ ಸಂದರ್ಭದಲ್ಲಿ ಇದೆ ವಾರ್ಡ್ ನ ನಿವಾಸಿ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಜಿಲ್ಲೆ – 318 ರ ಅಧ್ಯಕ್ಷರಾದ ಕವಿತ ವಿನೋದ್ ರವರನ್ನು ಸಂಪರ್ಕಿಸಲಾಗಿತ್ತು. ತಮ್ಮ ಕ್ಲಬ್ ವತಿಯಿಂದ 5 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಡುವುದಾಗಿ ಮುಂದೆ ಬಂದಿದ್ದು, ಇದಕ್ಕೆ ಪಾಲಿಕೆ ವತಿಯಿಂದ ಅನುಮತಿ ಪಡೆದು ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಇವರ ಈ ಸಹಕಾರವನ್ನು ಶಾಸಕ ಎಸ್ ಎ ರಾಮದಾಸ್ ರವರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್, ಕ್ಲಬ್ ನ ಮಾಜಿ ಅಧ್ಯಕ್ಷರಾದ ರಚನ ನಾಗೇಶ್, ಉಪಾಧ್ಯಕ್ಷರಾದ ಸಂಧ್ಯಾ ದಿನೇಶ್, PDC ಡಾ. ಸಾರಿಕಾ ಪ್ರಸಾದ್, ಅಂಜು ಜಯಕುಮಾರ್, ಎ ಜಿ ಭಾರತಿ, ಪಾರ್ವತಿ ವಿ ಶೆಟ್ಟಿ, ಸುಶಿಲಮ್ಮ ಮರೀಗೌಡ ಹಾಜರಿದ್ದರು.
Key words: mysore- MLA- SA Ramadas-work- worship