ಮೈಸೂರು,ಜೂ,1,2021(www.justkannada.in): ಕೊವೀಡ್ ನಿಂದ ಮೃತಪಟ್ಟಂತಹ ವ್ಯಕ್ತಿಗಳ ಶವ ಸಂಸ್ಕಾರ ನಡೆಯುತ್ತಿರುವ ಮೈಸೂರು ನಗರದಲ್ಲಿನ 4 ಚಿತಗಾರ ಸ್ಥಳಗಳಿಗೆ ಶಾಸಕ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸಲಹೆಗಾರ ಎಸ್ ಎ ರಾಮದಾಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಬನ್ನಿಮಂಟಪ ಬಳಿಯ ಜೋಡಿತೆಂಗಿನ ಮರದ ಸ್ಮಶಾನ, ವಿಜಯನಗರ ಚಿತಗಾರ, ಜಯನಗರ ಚಿತಗಾರ, ನಂಜನಗೂಡು ರಸ್ತೆ, ಗುಂಡುರಾವ್ ನಗರ, ಖಬ್ರಸ್ತಾನ್ ಸ್ಮಶಾನಕ್ಕೆ ಶಾಸಕ ಎಸ್.ಎ ರಾಮದಾಸ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ಅಪ್ಪಣ್ಣ , ರಾಜೀವ್ , ಮಹದೇವಸ್ವಾಮಿ, ಅನಿಲ್ ಕ್ರಿಸ್ಟೋಫರ್ ರವರ ತಂಡ ಉಪಸ್ಥಿತರಿದ್ದರು.
ಚಿತಾಗಾರದಲ್ಲಿ ಬೇಕಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಕೋವಿಡ್ ನಿಂದ ಮೃತಪಟ್ಟವರ ಸಂಬಂಧಿಗಳು ಬಂದಾಗ ಅವರಿಗೆ ಕುಳಿತುಕೊಳ್ಳಲು ಸರಿಯಾದಂತಹ ವ್ಯವಸ್ಥೆ ಇಲ್ಲದೇ ಇರುವುದನ್ನು ನೋಡಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು. ಅಷ್ಟೇ ಅಲ್ಲದೆ ಅಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಕೋವಿಡ್ -19 ಸಮಯದಲ್ಲಿ ಸಲ್ಲಿಸುತ್ತಿರುವ ಅಪೂರ್ವವಾದ ಸೇವೆಗೆ ಗೌರವಾರ್ಥವಾಗಿ ಸನ್ಮಾನಿಸಲಾಯಿತು.
ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಹಾಗೂ ಸ್ಮಶಾನಗಳ ಮೇಲುಸ್ತುವಾರಿಯಾದ ಅಪ್ಪಣ್ಣ ಅವರ ಜನ್ಮ ದಿನದಂದು ಶವ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ death certificate ಅನ್ನು ಅವರ ಮನೆಗೆ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಇನ್ನೂ ಹೆಚ್ಚಿನದಾಗಿ ಕೋವಿಡ್ ನಂತರದಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಆಗಬೇಕಾದ ಸ್ಮಶಾನಗಳ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಕೋವಿಡ್ 19 ಕಡಿಮೆಯಾದ ನಂತರ ಮುಂದಿನ ದಿನದಲ್ಲಿ ಆ ಸಮಾಜದ ಪ್ರಮುಖರನ್ನು ಕರೆಸಿ ಅವರ ಆಚಾರ, ಪದ್ಧತಿಯಂತೆ ಸ್ಮಶಾನಗಳಲ್ಲಿ ವ್ಯವಸ್ಥೆಗಳನ್ನು ಮಾಡಲು ಈಗಾಗಲೇ ಹಣ ಮಂಜೂರು ಮಾಡಲಾಗಿದ್ದು, ಈ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಶಾಸಕ ಎಸ್.ಎ ರಾಮದಾಸ್ ಈ ಸಮಯದಲ್ಲಿ ತಿಳಿಸಿದರು. ಈ ವೇಳೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
Key words: mysore-MLA- SA Ramdas -visits -inspects – Cemetery