ಮೈಸೂರು,ಸೆಪ್ಟಂಬರ್,3,2021(www.justkannada.in): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಮತ್ತೆ ಕಿಡಿಕಾರಿದ್ದು, ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್ ಹೇಳಿದ್ದಿಷ್ಟು…
ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್ಟಿ ಸೇರಿ 9ರೂ ಆಗುತ್ತದೆ. ಆದರೆ ರೋಹಿಣಿ ಸಿಂಧೂರಿ ಖರೀದಿಸಿರೋ ಒಂದು ಬ್ಯಾಗ್ ಬೆಲೆ 52 ರೂ. ಕೇವಲ ಬ್ಯಾಗ್ ಮೇಲೆ ಪ್ರಿಂಟ್ ಹಾಕಲು 42ರೂ ಬೇಕಾ.? ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಈ ಬ್ಯಾಗ್ ಖರೀದಿಯಲ್ಲಿ 6ಕೋಟಿ 18 ಲಕ್ಷ ರೂ ಅಕ್ರಮವೆಸಗಲಾಗಿದೆ. ವಾಸ್ತವವಾಗಿ ಖರೀದಿಗೆ 1ಕೋಟಿ 47ಲಕ್ಷ ಆಗ್ತಿತ್ತು ಎಂದು ಅಂಕಿ ಅಂಶಗಳ ಮೂಲಕ ಸಾರಾ ಮಹೇಶ್ ಆರೋಪಿಸಿದರು.
ಅಲ್ಲದೆ ಈ ಸಂಬಂಧ ಇಂದು ಬೆಂಗಳೂರಿಗೆ ಹೋಗ್ತಿದ್ದೀನಿ. ಇವತ್ತೇ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡ್ತಿನಿ. ಈ ಬಗ್ಗೆ ಕ್ರಮ ಆಗಲಿಲ್ಲ ಅಂದ್ರೆ ಮುಖ್ಯ ಕಾರ್ಯದರ್ಶಿಗಳ ಮುಂದೆ ಧರಣಿ ಮಾಡುತ್ತೇನೆ ಎಂದು ಸಾ.ರಾ ಮಹೇಶ್ ಹೇಳಿದರು.
ನಾನು ಅವರ ವಿರುದ್ಧ 8 ಆರೋಪಗಳನ್ನ ಮಾಡಿದ್ದೆ. ಅವರ ಅಕ್ರಮದ ಸಂಪೂರ್ಣ ರಿಪೋರ್ಟ್ ನನ್ನ ಬಳಿ ಇದೆ. ನಾನು ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಬಳಿ ಈ ಬಗ್ಗೆ ಮನವಿ ಮಾಡಿದ್ದೇನೆ. ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣದ ಹಣವನ್ನು ಸಂಪೂರ್ಣ ಅವರಿಂದಲೇ ವಸೂಲಿ ಮಾಡುವಂತೆ ಮನವಿ ಮಾಡಿದ್ದೇನೆ. ಡೆತ್ ಸಂಖ್ಯೆ ಮುಚ್ಚಿಟ್ಟಿರೋದು, ಪ್ರಾಧಿಕಾರದ ಹಣ ದುರುಪಯೋಗ ಸೇರಿ ಎಲ್ಲಾ ಅಕ್ರಮದ ದಾಖಲೆ ನನ್ನ ಬಳಿ ಇದೆ ನಿಮ್ಮ ಮುಂದೆ ಎಲ್ಲಾ ದಾಖಲಾತಿಗಳನ್ನು ಇಟ್ಟಿದ್ದೇನೆ ಎಂದು ಸಾ.ರಾ ಮಹೇಶ್ ಹೇಳಿದರು.
Key words: mysore- MLA –sara Mahesh- IAS officer-Rohini Sindhuri- kick bag