ಮೈಸೂರು,ಜು,1,2019(www.justkannada.in): ಒಂದು ಡಿಸಿಪ್ಲಿನ್ ಇಲ್ಲದೆ ಸಭೆ ನಡಿಸ್ತಿದ್ದೀರಾ ..!! ಇವತ್ತಿನ ಸಭೆ ಬಗ್ಗೆ ನಂಗೆ ಮಾಹಿತಿನೇ ಇಲ್ಲ , ಯಾರೋ ದಾಸಯ್ಯ ಫೋನ್ ಮಾಡಿದ್ರೆ ಸಭೆಗೆ ಬರಬೇಕಾ ..?? ಹೀಗೆ ಸಚಿವ ಜಿ.ಟಿ ದೇವೇಗೌಡರ ಎದುರೇ ಅಧಿಕಾರಗಳ ವಿರುದ್ದ ಗರಂ ಆಗಿದ್ದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್..
ಹೌದು, ಇಂದು ಮೈಸೂರು ನಗರ ಅಭಿವೃದ್ಧಿ ವಿಚಾರವಾಗಿ ಸಭೆ ಕರೆಯಲಾಗಿತ್ತು. ಸಭೆಯ ಬಗ್ಗೆ ಮಾಹಿತಿ ನೀಡದಕ್ಕೆ ಶಾಸಕ ತನ್ವೀರ್ ಸೇಠ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಂದು ಸಭೆ ನಡೆಯುವ ಬಗ್ಗೆ ನಮಗೆ ಮಾಹಿತಿನೇ ಇಲ್ಲಾ. ಇದು ಶಾಸಕ ಸ್ಥಾನಕ್ಕೆ ಅಗೌರವ ತಂದಂತೆ. ಸಭೆ ಸಿದ್ಧತೆ ಇಲ್ಲದೆ ಸಭೆ ಯಾಕ್ರೀ ಮಾಡ್ತೀರಾ ..?? ರಾಮದಾಸ್ ಅವರಿಗೆ ನೆನ್ನೆ ಮಾಹಿತಿ ನೀಡಿದ್ದೀರಾ , ಒಂದು ಡಿಸಿಪ್ಲಿನ್ ಇಲ್ಲದೆ ಸಭೆ ನಡಿಸ್ತಿದ್ದೀರಾ ..!! ಎಂದು ಸಚಿವ ಜಿ.ಟಿ ದೇವೇಗೌಡರ ಎದುರೇ ಅಧಿಕಾರಿಗಳ ವಿರುದ್ಧ ಶಾಸಕ ತನ್ವಿರ್ ಸೇಠ್ ಕಿಡಿಕಾರಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಜಿ.ಟಿ ದೇವೇಗೌಡರು ಶಾಸಕ ತನ್ವಿರ್ ಸೇಠ್ ರನ್ನ ಸಮಾಧಾನಪಡಿಸಿದ ಘಟನೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡರ ನೇತೃತ್ವದಲ್ಲಿ ಪಾಲಿಕೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರದ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ನಂತರ ನಗರ ಪ್ರದಕ್ಷಿಣೆ ಮಾಡುವ ಸಲುವಾಗಿ ಇಂದು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕರುಗಳಾದ ತನ್ವಿರ್ ಸೇಠ್, ಎಸ್.ಎ ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ , ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಅಹಮದ್ ಶಾಫಿ ಹಾಗೂ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು.
ಮೈಸೂರು ನಗರ ಅಭಿವೃದ್ಧಿಗೆ ಯಾವ ಯಾವ ಯೋಜನೆಗಳಿಗೆ ಅನುಧಾನ ಎಷ್ಟು ಬೇಕಿದೆ ಹಾಗೂ ಯಾವೆಲ್ಲ ಕೆಲಸ ನಡೆಯುತ್ತಿದೆ ಎಂಬುದರ ಬಗ್ಗೆ ಸಚಿವ ಜಿ.ಟಿ ದೇವೇಗೌಡ ಹಾಗೂ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೇ ನಗರ ಪ್ರದಕ್ಷಿಣೆ ಮ್ಯಾಪ್ ಹೇಗೆ ರಚಿಸಿದ್ದಿರಿ ಎಂದು ಶಾಸಕ ತನ್ವಿರ್ ಪ್ರಶ್ನೆಸಿದರು. ಆದರೆ ಅಧಿಕಾರಿಗಳು ಕಾಮಗಾರಿ ಬಗ್ಗೆ ಮಾಹಿತಿ ನೀಡಲಿಲ್ಲ ಸಚಿವರ ಹಾಗೂ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡದೆ ಪಾಲಿಕೆ ಅಧಿಕಾರಿಗಳು ಗಲಿಬಿಲಿಗೊಂಡ ಪ್ರಸಂಗ ನಡೆಯಿತು. ಅಧಿಕಾರಿಗಳ ಉತ್ತರಕ್ಕೆ ಸಚಿವರು ಹಾಗೂ ಶಾಸಕರು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಹಾಯಕ ಆಯುಕ್ತ ಶಿವಾನಂದ್ ಮೂರ್ತಿ ಮಾಹಿತಿ ನೀಡಿದರು.
Key words: mysore- mla- Tanvir Seth –meeting-outrage-against-officer