ಮೈಸೂರು,ನವೆಂಬರ್,20,2020(www.justkannada.in): ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ಧರಾಮಯ್ಯ ಇಂದು ತಮ್ಮ ಕ್ಷೇತ್ರದ ವ್ಯಾಪ್ತಿಯ ಪಿಡಿಒಗಳ ಜತೆ ಸಭೆ ನಡೆಸಿ ಬಳಿಕ ಸಾರ್ವಜನಿಕರ ಬಳಿ ಅಹವಾಲು ಸ್ವೀಕಾರ ಮಾಡಿದರು.
ಮೈಸೂರು ಜಿಲ್ಲೆ ಟಿ. ನರಸೀಪುರ ಪಟ್ಟಣದ ಮಿನಿವಿಧಾನಸೌಧದ ಶಾಸಕರ ಕಚೇರಿಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಿಡಿಒಗಳ ಜೊತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸಭೆ ನಡೆಸಿ ಚರ್ಚಿಸಿದರು. ನಂತರ ಸಾರ್ವಜನಿಕರ ಬಳಿ ಅಹವಾಲು ಸ್ವೀಕರಿಸಿದರು.
ಇನ್ನು ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಒಂದು ಸಮುದಾಯಕ್ಕೆ ಪ್ರಾಧಿಕಾರ ಮಾಡಲು ಹೊರಟರೆ ಎಲ್ಲಾ ಸಮುದಾಯಗಳು ಕೇಳುತ್ತವೆ. ಅಲ್ಲದೇ ಪ್ರಾಧಿಕಾರ ರಚನೆ ಮಾಡಲು ಕೆಲ ನಿಯಮಗಳಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರಾಧಿಕಾರ ಮಾಡಿದರೆ ಉತ್ತಮ. ಚುನಾವಣೆ ಸಮಯದಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡಲು ಪ್ರಾಧಿಕಾರ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಸಂಘಟನೆಗಳು ಬರುವ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ. ಡಿಸೆಂಬರ್ 5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಮ್ಮ ಸಹಮತವಿದೆ ಎಂದರು.
Key words: mysore- mla- Yatindra Siddaramaiah- Meeting – PDOs-public