ಮೈಸೂರು,ಜು,28,2020(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಪತನದ ನಂತರ ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಹೆಚ್.ವಿಶ್ವನಾಥ್ ನಡುವೆ ಉಂಟಾಗಿರುವ ರಾಜಕೀಯ ತಿಕ್ಕಾಟ, ವಾದ -ವಾಗ್ವಾದ ಇದೀಗ ಮತ್ತೆ ಮುಂದುವರೆದಿದೆ.
ಬಾಂಬೆ ಡೈರಿಸ್ ಪುಸ್ತಕದ ಬ್ಲಾಕ್ ಮೇಲ್ ನಿಂದ ಹೆಚ್.ವಿಶ್ವನಾಥ್ ಗೆ ಪರಿಷತ್ ಸ್ಥಾನ ಸಿಕ್ಕಿದೆ ಎಂದು ಟೀಕಿಸಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ರನ್ನ ಎಂಎಲ್ ಸಿ ಹೆಚ್.ವಿಶ್ವನಾಥ್ ಪರೋಕ್ಷವಾಗಿ ಕುಟುಕಿದ್ದಾರೆ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ. ಪುಸ್ತಕ ಬರೆದು ಬೇರೆಯವರಿಗೆ ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಐ ಆ್ಯಮ್ ಕ್ಲೀನ್. ನಾನು ಕ್ಲೀನ್ ಆಗಿರುವುದಕ್ಕೆ ಒಬ್ಬನನ್ನು ಚಾಮುಂಡಿಬೆಟ್ಟಕ್ಕೆ ಕರೆದದ್ದು ಎಂದು ಹೆಸರೇಳದೆ ಸಾರಾ ಮಹೇಶ್ ಗೆ ಟಾಂಗ್ ನೀಡಿದರು.
ಬಾಂಬೆ ಡೈರೀಸ್ ಪುಸ್ತಕ ಬರೆಯುತ್ತಿರುವುದು ಅಂದಿನ ಬೆಳವಣಿಗೆಗಳ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಆ ಪುಸ್ತಕ ಬರೆಯುತ್ತಿದ್ದೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾತನಾಡಿದ್ದ ಸಾ.ರಾ ಮಹೇಶ್, ಹೆಚ್. ವಿಶ್ವನಾಥ್ ಕಾನೂನುಬಾಹಿರವಾಗಿ ನಾಮನಿರ್ದೇಶನಗೊಂಡಿದ್ದಾರೆ.ದುರಂತ ನಾಯಕ ಸಾಹಿತ್ಯ ಕ್ಷೇತ್ರಕ್ಕೆ ಹೋಗಿರುವುದರಿಂದ ರಾಜಕೀಯ ಕ್ಷೇತ್ರ ಶುಭ್ರವಾಗಿದೆ. ಇನ್ನು ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಬೇಕು, ರಾಜಕೀಯ ಕ್ಷೇತ್ರವನ್ನು ಹೊಲಸುಗೊಳಿಸಿದಂತೆ ಸಾಹಿತ್ಯ ಕ್ಷೇತ್ರವನ್ನು ವಿಶ್ವನಾಥ್ ಹೊಲಸು ಮಾಡದಿದ್ದರೆ ಸಾಕು ಎಂದು ಲೇವಡಿ ಮಾಡಿದ್ದರು.
Key words: mysore- MLC- H.Vishwanath-former minister- Sa.ra mahesh