ಮಕ್ಕಳನ್ನ ಮಾರಾಟ ಮಾಡ್ತಿದ್ದ ತಾಯಿ-ಮಗಳು ಅಂದರ್..

ಮೈಸೂರು,ಆಗಸ್ಟ್,4,2021(www.justkannada.in): ಪೋಷಕರ ಬಡತನ ಟಾರ್ಗೆಟ್ ಮಾಡಿ ಪುಸಲಾಯಿಸಿ ಮಗು ಪಡೆದು ಮಕ್ಕಳನ್ನ ಮಾರಾಟ ಮಾಡ್ತಿದ್ದ ತಾಯಿ-ಮಗಳನ್ನ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ಪಟ್ಟಣದ ಶ್ರೀಮತಿ ಅಲಿಯಾಸ್ ಸರಸ್ವತಿ, ಮಗಳು ಲಕ್ಷ್ಮಿ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಪೋಷಕರ ಬಡತನ ಟಾರ್ಗೆಟ್ ಮಾಡಿ ಪುಸಲಾಯಿಸಿ ಮಗು ಪಡೆದು ಸುಧೀರ್ಘ ಅವಧಿಯ ಮಕ್ಕಳಾಗದ ದಂಪತಿಗೆ ಮಾರಾಟ ಮಾಡುತ್ತಿದ್ದರು.

ಮಗು ಹಾರೈಕೆ ಕೇಂದ್ರ ತೆರೆದು ಮಕ್ಕಳು ಪೋಷಕರುನ್ನ ಗುರುತಿಸುತ್ತಿದ್ದ ಆರೋಪಿ ತಾಯಿ-ಮಗಳು, ಮಗು ಪಡೆಯಬೇಕೆನ್ನುವ ಬಾಣಂತಿಯರಿಗೆ ತಾವೇ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸುತ್ತಿದ್ದರು. ಬಂಧಿತರಿಂದ ಎರಡು ಮಕ್ಕಳ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ನಂಜನಗೂಡಿನ ಜ್ಯೋತಿ ಹಾಗೂ ಕೊಳ್ಳೇಗಾಲ ಮೂಲದಒಂದು ಮಗು ಮಾರಾಟದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮತ್ತೊಂದು ಮಗುವಿನ ಮಾರಾಟದ ಸುಳಿವು ಸಿಕ್ಕಿದೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್,  ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಇತ್ತೀಚೆಗೆ ಮಗುವೊಂದು ಮಾರಾಟವಾಗಿತ್ತು.  ಗಂಡ ಸತ್ತ ಬಡ ಮಹಿಳೆಯೊಬ್ಬಳು ತಮ್ಮ ಮೂರು ತಿಂಗಳ ಮಗುವನ್ನು ಬೇರೊಬ್ಬಳಿಗೆ ನೀಡಿದ್ದಳು. ಈ ಪ್ರಕರಣದ ಬೆನ್ನಲ್ಲೇ ನಂಜನಗೂಡಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಜ್ಯೋತಿ ಎಂಬ ಮಹಿಳೆ ಇತ್ತೀಚೆಗೆ ಮೂರು ತಿಂಗಳ ಮಗುವನ್ನು ಶ್ರೀಮತಿಗೆ ನೀಡಿದ್ದಳು.  ಆರಂಭದಲ್ಲಿ ಈ ಪ್ರಕರಣದಲ್ಲಿ ಆರ್ಥಿಕ ವಹಿವಾಟು ನಡೆದಿಲ್ಲ ಎನ್ನಲಾಗಿತ್ತು. ಆದ್ರೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ, ದಲ್ಲಾಳಿ ಶ್ರೀಮತಿ ಮಗು ಮಾರಾಟ ಮಾಡಿ 3 ಲಕ್ಷ ರೂಪಾಯಿವರೆಗೂ ಹಣ ಪಡೆದುಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ.

ಈಕೆಯ ಮೂಲಕವೇ ಮತ್ತಷ್ಟು ಮಕ್ಕಳ ಮಾರಾಟವಾಗಿರುವ ಬಗ್ಗೆಯೂ ಶಂಕೆ ಮೂಡಿತ್ತು. ಮಕ್ಕಳ ಮಾರಾಟ ಜಾಲ ಭೇದಿಸಲು ಪೊಲೀಸರು ತೀವ್ರವಾದ ತನಿಖೆ ಮಾಡುತ್ತಿದ್ದರು.  ಇದೀಗ ಮತ್ತೊಂದು ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.

ಈ ಮೊದಲು ಜ್ಯೋತಿ ಎಂಬಾಕೆಯಿಂದ ಮಗುವನ್ನು ಪಡೆದು ಹೊಳೆನರಸೀಪುರ ಮೂಲದ ದಂಪತಿಗೆ ಮಾರಾಟ ಮಾಡಲಾಗಿತ್ತು. ಎರಡನೇ ಮಗುವನ್ನು ಮಂಜುಳ ಎಂಬಾಕೆಯಿಂದ ಪಡೆದು  ಕೊಳ್ಳೇಗಾಲ ಪಟ್ಟಣದ ದಂಪತಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳಾದ ಶ್ರೀಮತಿ ಹಾಗೂ ಲಕ್ಷ್ಮಿಯನ್ನು ವಶಕ್ಕೆ ಪಡೆಯಲಾಗಿದೆ. ಕಾನೂನಿಗೆ ವಿರುದ್ಧವಾಗಿ ಮಕ್ಕಳನ್ನು ಮಾರಾಟ ಮಾಡಿರುವವರು, ಮಧ್ಯವರ್ತಿಗಳು ಹಾಗೂ ಮಕ್ಕಳನ್ನು ಕೊಂಡುಕೊಂಡಿರುವವರು ತಪ್ಪಿತಸ್ಥರಾಗುತ್ತಾರೆ. ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್  ಹೇಳಿದ್ದಾರೆ.

ENGLISH SUMMARY…

Mother-daughter duo held in Mysuru for selling infants
Mysuru, August 4, 2021 (www.justkannada.in): A mother and daughter, who were convincing poor parents to part with their infants, and later sell the infants for want of money have been held by the Police.
The duo is identified as Srimati alias Saraswathi, and daughter Lakshmi. They used to target poor parents and somehow convince them to part with the infants and sell it to childless parents.
The duo had opened a child care center in Najangud. They used to identify vulnerable parents. They used to take pregnant women to the hospital and help them in delivery. Two cases of selling infants have come to light. The police who were investigating the case of a similar case in Kollegal and Nanjangud traced out the duo.
Addressing a press meet in Mysuru today, Superintendent of Police R. Chetan informed that a case was registered in Najangud recently, where a woman named Jyothi, after losing her husband, had given her three-month-old infant to another lady called Srimathi. In the beginning, it didn’t appear like a racket. But a deeper investigation by the police traced that Srimathi had sold the infant for Rs. 3 lakh.
Suspecting more such cases the police had intensified the investigation, following which another case has been unearthed.
In the one case, the infant of Jyothi was sold to a couple of Holenarsipura and in another case, the infant of Manjula was sold to a couple in Kollegal. Police have arrested the accused mother-daughter duo Srimathi and Lakshmi. The persons who have sold the infants, mediators, and the people who have purchased all are considered as guilty. Legal action will be initiated against all of them, informed SP R. Chethan.
Keywords: Mysuru/ Nanjangud/ SP R. Chetan/ child/ infant selling/ racket

Key words: mysore-Mother-daughter –Arrest-sold -baby