ಮೈಸೂರು,ಜನವರಿ,31,2022(www.justkannada.in): ಮನೆ ಮನೆಗೆ ಪೈಪ್ ಲೈನ್ ಮೂಲಕ ಅನಿಲ ಸಂಪರ್ಕ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕರಾದ ಎಸ್.ಎ ರಾಮದಾಸ್, ಎಲ್. ನಾಗೇಂದ್ರ ನಡುವೆ ಟಾಕ್ ವಾರ್ , ಸವಾಲು ಪ್ರತಿಸವಾಲು ನಡೆದ ಬೆನ್ನಲ್ಲೆ ಇದೀಗ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಎಲ್ಲಾ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಮನೆ ಮನೆಗೆ ಪೈಪ್ ಲೈನ್ ಮೂಲಕ ಅನಿಲ ಸಂಪರ್ಕ ಯೋಜನೆ. ಇದು ಎಂಪಿ ಕಾರ್ಯಕ್ರಮ ಅಲ್ಲ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಈ ಯೋಜನೆ ಜನೋಪಯೋಗಿ ಯೋಜನೆ. ನಮ್ಮದೇ ಪಕ್ಷದ ಶಾಸಕರು ವಿರೋಧ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಖಾಸಗಿ ಕಂಪನಿಗಳು ಗುಂಡಿ ಮಾಡಿ ಹೊಗ್ತಾರೆ ಅವ್ರು ಮುಚ್ಚುತ್ತಾರೆ. ಈ ಯೋಜನೆ ಹಲವು ರಾಜ್ಯ, ಜಿಲ್ಲೆಗಳಲ್ಲಿ ವಿಸ್ತರಣೆ ಆಗಿದೆ. ಇದು ಹೊಸ ಯೋಜನೆ ಏನಲ್ಲ. 24 ಗಂಟೆ ನೀರು ಕೊಡ್ತಿವಿ ಅಂತಾ ಬಂದ ಜೊಸ್ಕೋ ಯೋಜನೆಗೆ ನೀವು ಯಾಕೆ ವಿರೋಧ ಮಾಡಿಲ್ಲ. ಏನ್ ಮಾಡಿ ಹೋದರು ಜೊಸ್ಕೋ ಅವರು. ನೀವು ಪಾಲಿಕೆ ಸದಸ್ಯರಾಗಿದ್ದೀರಿ ತಾನೇ. ಈ ಯೋಜನೆಯಲ್ಲಿ ಗುಂಡಿ ಮುಚ್ಚಲು ಕೂಡ ಹಣ ಇದೆ. ಈ ಯೋಜನೆ ತ್ವರಿತವಾಗಿ ಜಾರಿಯಾಗಲು ಬಿಡಬೇಕು. ಯಾವುದೇ ಎಂಪಿ, ಎಂಎಲ್ಎ ಗಳು ಆಯಾ ಕ್ಷೇತ್ರದ ಮಾಲೀಕರಲ್ಲ, ಸೇವಕರು. ನಮ್ಮನ್ನು ಆಯ್ಕೆ ಮಾಡಿರೋದು ಸೇವೆ ಮಾಡೋದಿಕ್ಕೆ ಎಂದು ಸಂಸದರು ಮತ್ತು ಶಾಸಕರಿಗೆ ಹೆಚ್.ವಿಶ್ವನಾಥ್ ಕಿವಿಮಾತು ಹೇಳಿದರು.
Key words: Mysore-MP- MLAs-MLC-H.Vishwanath