ಮೈಸೂರು,ಸೆಪ್ಟಂಬರ್,2,2021(www.justkannada.in): ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾಯಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ.
ಮೈಸೂರು-ಕೊಡಗು ಭಾಗಕ್ಕೆ ಸೇರಿರುವ ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಹೆಸರು ಬದಲಾವಣೆಗೆ ಸಂಸದ ಪ್ರತಾಪ್ ಸಿಂಹ ಒತ್ತಾಯ ಮಾಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಕೊಡಗು ಜಿಲ್ಲೆಯ ಜನರಿಂದ ಆನ್ಲೈನ್ ಅಭಿಯಾನ ನಡೆಸಲಾಗುತ್ತಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಲ್ಲಿ ಈಗಾಗಲೇ 3ರಾಷ್ಟೀಯ ಉದ್ಯಾನವನಗಳಿವೆ. ದೇಶವ್ಯಾಪಿ ಅನೇಕ ಅರಣ್ಯಗಳಿಗೆ ನೆಹರು ಕುಟುಂಬದ ಹೆಸರಿದೆ. ಸರ್ಕಾರದ ಯೋಜನೆಗಳಿಗೆ ಪಿತ್ರಾರ್ಜಿತ ಆಸ್ತಿಯಂತೆ ಹೆಸರುಗಳನ್ನಿಡಲಾಗಿದೆ. ಹಾಗಾಗಿ ನಾಗರಹೊಳೆ ಅರಣ್ಯಕ್ಕೆ ಇದೇ ಮಣ್ಣಿನ ಮಗನಾಗಿರುವ ಫೀಲ್ಡ್ ಮಾರ್ಷಲ್ ಕರಿಯಪ್ಪ ಹೆಸರಿಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
Key words: mysore-MP Pratap simha- demands -rename -Rajiv Gandhi Nagarahole National Park