ತಂಬಾಕು ಬೆಳೆಗೆ ದಂಡ ಕಡಿಮೆ ಮಾಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಅಕ್ಟೋಬರ್,22,2021(www.justkannada.in):  ರೈತರ ತಂಬಾಕು ಬೆಳೆಗೆ ವಿಧಿಸಲಾಗುತ್ತಿರುವ  ದಂಡ ಕಡಿಮೆ ಮಾಡುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗೆ ಪತ್ರ ಬರೆದಿರುವ ಸಂಸದ ಪ್ರತಾಪ್ ಸಿಂಹ, ತಂಬಾಕು ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ. ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಹವಾಮಾನ ವೈಪರಿತ್ಯಗಳನ್ನು ಮತ್ತು ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ತಂಬಾಕು ಮಂಡಳಿಯಲ್ಲಿ ಅಧಿಕೃತ ಬೆಳೆಗಾರರು ಬೆಳೆದಿರುವ ಹೆಚ್ಚಿನ ತಂಬಾಕಿಗೆ ಹಾಗೂ ಅನಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೆ ಶೇಕಡಾ 10 % ದಂಡವನ್ನು ಮತ್ತು ಪ್ರತಿ ಕೆ.ಜಿ ಗೆ 2 ರೂ ಶುಲ್ಕವನ್ನು ವಿದಿಸುತ್ತಿದ್ದಾರೆ.

ಇದರಿಂದ ತಂಬಾಕು ಬೆಳಗಾರರಿಗೆ ಲಾಭ ಕೈ ಸೇರುತ್ತಿಲ್ಲ. ಹಾಗಾಗಿ ಶೇ 10% ಇಂದ ಶೇ.5 % ಗೆ  ಹಾಗೂ ಪ್ರತಿ ಕೆ.ಜಿ ಗೆ 2 ರೂ ಶುಲ್ಕವನ್ನು 1 ರೂ.ಗೆ ಇಳಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದ್ದಾರೆ.

Key words: mysore-MP-Pratap Simha-Union Minister –reduce- penalties- tobacco crops.

ENGLISH SUMMARY….

MP Pratap Simha writes to Union Govt. to reduce fine on Tobacco crop
Mysuru, October 22, 2021 (www.justkannada.in): Mysuru-Kodagu MP Pratap Simha has written a letter to Union Commerce Minister Piyush Goyal to reduce the amount of fine levied upon the farmers who grow tobacco crops.
In the letter, it is mentioned that “Tobacco is one of the major crops grown in Mysuru region. Many farmers depend upon tobacco crops for their livelihood. They are growing the crop amidst several difficulties, including weather conditions and labor problems. Presently the additional tobacco crop grown by the licensed growers of the Tobacco Board and illegal tobacco growers has imposed a 10% fine and Rs.2 fee for every kilo of the crop grown. Hence, the tobacco growers are in deep trouble. I request you to kindly reduce the fine amount from 10% to 5% and the fee from Rs. 2 to Re. 1.”
Keywords: MP Pratap Simha/ tobacco crop/ Union Government/ letter