ಮೈಸೂರು,ಆ,20,2020(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ಎಸ್ ಡಿಪಿಐ ಛೂ ಬಿಟ್ಟು ದಲಿತರ ಮೇಲೆ ದೌರ್ಜನ್ಯ ಮಾಡಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಎಸ್ ಡಿ ಪಿ ಐ ಸಂಘಟನೆ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋವು ವೇದನೆಯಾಗುತ್ತಿರುವುದು ಆಶ್ಚರ್ಯ ತಂದಿದೆ. 30 ವರ್ಷದ ಗಲಾಟೆ ಬಗ್ಗೆ ಸಿದ್ದು ಪ್ರಸ್ತಾಪ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ವಿಚಾರ ಸಂಬಂಧ, ಇದರಿಂದ 6, 8 ತಿಂಗಳು 1 ವರ್ಷ ತನಿಖೆ ವಿಳಂಬ ಮಾಡಿ. ವ್ಯವಸ್ಥಿತವಾಗಿ ಎಸ್ಡಿಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದಲಿತರನ್ನು ಮಟ್ಟ ಹಾಕುವ ಕೆಲಸ ಮಾಡಿದರು. ಹೀಗೆ ದಲಿತರಿಗೆ ನಿರಂತರವಾಗಿ ಒಳ ಏಟು ಹಾಕಿದರು. ಪರಮೇಶ್ವರ್ ಅವರಿಗೆ ಡಿಸಿಎಂ ತಪ್ಪಿಸಿದ್ದು ಸಿದ್ದರಾಮಯ್ಯ. ಶ್ರೀನಿವಾಸ್ ಪ್ರಸಾದ್ ತುಳಿದಿದ್ದು ಸಿದ್ದರಾಮಯ್ಯ. ಮಲ್ಲಿಕಾರ್ಜುನ ಖರ್ಗೆ ಮುನಿಯಪ್ಪ ಸೋಲಿಸಿದ್ದು ಯಾರು..? ಎಂದು ಸಿದ್ಧರಾಮಯ್ಯಗೆ ಸಂಸದ ಪ್ರತಾಪ್ಸಿಂಹ ಪ್ರಶ್ನಿಸಿದರು.
ಜಮೀರ್ ಅಹಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ
ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ವಿರುದ್ದ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ, ಗಲಾಟೆ ನಡೆದೆಲೆಲ್ಲ ಜಮೀರ್ ಏಕೆ ಹಾಜರಾಗುತ್ತಾರೆ…? ಜಮೀರ್ ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ ಜಮೀರ್ ಅಹಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಅಖಂಡ ಶ್ರೀನಿವಾಸ್ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ. ಪುಂಡ ಮುಸಲ್ಮಾನರ ಹೆಸರು ಹೇಳದಂತೆ ಒತ್ತಡ ಹಾಕಲಾಗುತ್ತಿದೆ. ರಾಜ್ಯದಲ್ಲಿ ಸ್ಲೀಪರ್ ಸೇಲ್ ಆ್ಯಕ್ಟೀವ್ ಆಗಿದೆ. ಹುಣಸೂರು ಮೈಸೂರಿನಲ್ಲಿ ಇದ್ದಾರೆ. ಕೇರಳ ಮಾದರಿಯಲ್ಲಿ ರಾಜಕೀಯ ಹತ್ಯೆ ಎಸ್ಡಿಪಿಐ ಕೆಎಫ್ಡಿ ಮೂಲಕ ರಾಜ್ಯಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ನವರು ಇದನ್ನು ಮಟ್ಟ ಹಾಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
Key words: mysore- MP-Pratap Sinha – serious allegations- against –former CM-Siddaramaiah