15 ದಿನದಿಂದ ಸಂಸದ ಪ್ರತಾಪಸಿಂಹ ಕಾಣೆಯಾಗಿದ್ದಾರೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯ.

ಮೈಸೂರು,ಜೂನ್,18,2021(www.justkannada.in):  ಕಳೆದ 15 ದಿನದಿಂದ ಸಂಸದ ಪ್ರತಾಪ್ ಸಿಂಹ ಕಾಣೆಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.jk

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಎಂ. ಲಕ್ಷ್ಮಣ್, ಐಎಎಸ್ ಅಧಿಕಾರಿಗಳನ್ನು ಓಡಿಸುವವರೆಗೂ ಆ್ಯಕ್ಟೀವ್ ಆಗಿದ್ದಿರಿ. ನಿಮ್ಮ ಫೇಸ್ ಬುಕ್ ಬಂದ್ ಮಾಡಿದ್ದೀರಿ. ಕಾಮೆಂಟ್ ಬಾಕ್ಸ್ ಬಂದ್ ಮಾಡಿದ್ದೀರಿ. ದಯಮಾಡಿ ಸಂಸದರೇ ಮುಂದೆ ಬನ್ನಿ .ಜನ ಸಾಯುತ್ತಿದ್ದಾರೆ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ. ಜಿಲ್ಲಾಧಿಕಾರಿಗಳೇ ನೀವು ಸಿಕ್ಕಿ ಹಾಕಿಕೊಳ್ಳಬೇಡಿ. ಸಾವಿನ ಸರಿಯಾದ ಅಂಕಿ ಅಂಶ ಕೊಡಿ ಎಂದು ಆಗ್ರಹಿಸಿದರು.

ಈಗ ಸರ್ಕಾರ ಒಂದು ಲಕ್ಷರೂ.  ಪರಿಹಾರ ನೀಡುತ್ತಿದೆ. ಇಲ್ಲಿಯವರೆಗೆ 33 ಸಾವಿರ ಸಾವಿನ ಸಂಖ್ಯೆ. ಇದರಲ್ಲಿ 1900 ಜನ ಮಾತ್ರ ಬಿಪಿಎಲ್ ಬಳಕೆದಾರರು. ಆದರೆ ಸರ್ಕಾರ ಒಂದು ಲಕ್ಷ ನೀಡಿ ಕಣ್ಣೋರೆಸುವ ತಂತ್ರ ಮಾಡುತ್ತಿದೆ. ಸರ್ಕಾರದ ಪ್ಯಾಕೇಜ್‌ ಗಳೆಲ್ಲಾ ಡುಬಾಕ್ ಆಗಿದೆ. ಸಚಿವ ಎಸ್ ಟಿ ಸೋಮಶೇಖರ್ ಪೋಟೋ ಸೆಷನ್ ಮಾತ್ರಾ ಮಾಡ್ತಾರೆ. ರಾಜ್ಯದಿಂದ ಒಂದು ನಯಾಪೈಸೆ ಮೈಸೂರಿಗೆ ತಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿ ಸಿಖಾ ವರ್ಗಾವಣೆ ವಿಚಾರ ಪ್ರತಾಪಸಿಂಹ ಆರೋಪಕ್ಕೆ ತಿರುಗೇಟು ನೀಡಿದ ಎಂ. ಲಕ್ಷ್ಮಣ್, ಪ್ರತಾಪಸಿಂಹ ಮಾಹಿತಿ ಪಡೆದು ಮಾತನಾಡಲಿ. ಆರೋಪಿ ಮರಿಗೌಡ ಅವತ್ತು ಜೈಲಿಗೆ ಹೋದರು. ಸಿಖಾ ಅವರು ತಕ್ಷಣ ವರ್ಗಾವಣೆ ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇನ್ನು ಮೈಸೂರು ಡಿಸಿ ವರ್ಗಾವಣೆ ಮಾಡಿಸುವಂತೆ ಜಿ ಟಿ ದೇವೇಗೌಡರು ಚಾಲೆಂಜ್ ಮಾಡಿದ್ದರು. ಆ ಚಾಲೆಂಜ್‌ ನಂತೆ ನೀವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು.

Key words: mysore-MP -Pratapasimha – missing -15 days- KPCC spokesperson- M Laxman