ಮೈಸೂರು,ಡಿಸೆಂಬರ್,26,2020(www.justkannada.in): 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸಲು ದೊಡ್ಡಪ್ರಮಾಣದ ಮಣ್ಣಿನ ರಾಶಿ ಅಗತ್ಯವಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಏಳು ಕೆರೆಗಳ ಹೂಳು ಮಣ್ಣನ್ನ ಬಳಸಿಕೊಳ್ಳಲು ಅನುಮತಿ ನೀಡುವಂತೆ ತಹಸೀಲ್ದಾರ್ ರಕ್ಷಿತ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.
ಮೈನ್ಸ್ ಅಂಡ್ ಜಿಯೋಲಜಿ ಇಲಾಖೆಗೆ ಒಂದು ಕ್ಯೂಬಿಕ್ ಮೀಟರ್ ಗೆ ನಿಗದಿಪಡಿಸಿರುವ ಸರ್ಕಾರದ ಬೆಳೆಯನ್ನು ಡಿ.ಬಿ.ಎಲ್ ನೀಡುವುದು ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಿಕ್ಕಿದಂತ್ತಾಗುತ್ತದೆ.
ಹೀಗಾಗಿ 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸಲು ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರದ ಶೆಟ್ಟಿನಾಯಕನಹಳ್ಳಿ ಕೆರೆ, ನಾಗವಲಕೆರೆ, ಹುಯಿಳಲುಕೆರೆ, ಬೊಮ್ಮೆನಹಳ್ಳಿಕೆರೆ, ಜೆಟ್ಟಿಹುಂಡಿಕೆರೆ, ಹುಯಿಳಲು ಕಟ್ಟೆ, ಕೆ.ಹೆಮ್ಮನಹಳ್ಳಿ ಕೆರೆಯ ಮಣ್ಣನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಹೊಂದಿರುವ ಡಿ.ಬಿ.ಎಲ್.ನ ಪ್ರತಿನಿಧಿ ಬನುಪ್ರಕಾಶ್ ಅವರು ಉಪಸ್ಥಿತರಿದ್ದರು.
Key words: mysore- mp- prathap simha-instruct-10-lane National Highway –Work- Tahsildar – use – lake soil