ಜೀವ ಉಳಿಸಲು ಹೋಗಿ ಜೀವನ ಹಾಳಾಗಬಾರದು- ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಜೂ,25,2020(www.justkannada.in):  ಕೊರೋನಾ ಸೋಂಕು ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಕುರಿತು ಚರ್ಚೆಗೆ ಬಂದಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ ನನಗೆ ಅನ್ನಿಸುತ್ತದೆ. ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿ ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಎಷ್ಟು ದಿನ ಅಂತ ಜನರನ್ನ ಮನೆಯಲ್ಲಿ ಕೂರಿಸುತ್ತೀರಾ? ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು. ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ ನನಗೆ ಅನ್ನಿಸುತ್ತದೆ. ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸರ್ಕಾರ ಅಂದ ಮೇಲೆ ಜೀವ ಜೀವನ ಎರಡನ್ನು ಉಳಿಸಬೇಕು ಎಂದರು.mysore-mp-prathap-simha-lockdwon

ತಜ್ಞರು ಭಾರತದಲ್ಲಿ ಲಕ್ಷಗಟ್ಟಲೆ ಜನ ಸಾಯ್ತಾರೆ ಅಂದಿದ್ರು. ಹಾಗೇನಾದ್ರು ಆಯ್ತಾ.? ಈಗಲೂ ಅಷ್ಟೇ ಏನೂ ಆಗೋಲ್ಲ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಸರ್ಕಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಲಾಕ್‌ಡೌನ್ ಸಡಿಲಿಕೆ‌ ಮಾಡುವಾಗ ಇದನ್ನೆಲ್ಲ ಯೋಚನೆ ಮಾಡಿದೆ. ಮುಂಬೈ, ದೆಹಲಿ, ಬೆಂಗಳೂರಿಗೂ ವ್ಯತ್ಯಾಸ ಇದೆ. ಅಲ್ಲಿನ ಪರಿಸ್ಥಿತಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸ ಇದೆ. ಬೆಂಗಳೂರಿನಲ್ಲಿ ಕಡಿಮೆ ಆಕ್ಟಿವ್ ಕೇಸ್ ಇದೆ. ಹಾಗಾಗಿ ಮತ್ತೆ ಲಾಕ್‌ಡೌನ್ ಎನ್ನುವ ಅನಿವಾರ್ಯತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು.

Key words: mysore- MP-Prathap simha-lockdwon