ಜಿಲ್ಲಾಧಿಕಾರಿ ವಿರುದ್ಧ ಮತ್ತೆ ಮುಂದುವರಿದ ಮೈಸೂರು ಸಂಸದರ ಆಕ್ರೋಶ .

 

ಮೈಸೂರು, ಮೇ,30.2021 : (www.justkannada.in news) ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಪಿಎಂ ಕೇರ್ ನಿಂದ ಬಂದ 40 ವೆಂಟಿಲೇಟರ್ ಗಳನ್ನ ಮೈಸೂರಿನಲ್ಲಿ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಮೈಸೂರಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವಿರುದ್ಧ ಮತ್ತೆ ಆರೋಪಗಳನ್ನು ಮಾಡಿದ್ದು, ಅದರ ಒಟ್ಟು ಸಾರಂಶ ಹೀಗಿದೆ…

jk

ಜನಪ್ರತಿನಿಧಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅಧಿಕಾರಿಗಳ ಮದ್ಯೆ ಅಸಹಕಾರ ಹೇಗಾಗುತ್ತೆ ? ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ ? ಸಿಎಂ ಯಡಿಯೂರಪ್ಪ, ಕೋವಿಡ್ ರೋಗಿಗಳಿಗೆ ನೆರವಾಗೆಲೆಂದು ಸ್ಟೆಪ್ ಡೌನ್ ಅಸ್ಪತ್ರೆ ತೆರೆಯಲು ಹೇಳಿದ್ದರು. ಸರ್ಕಾರ ಕೋವಿಡ್ ನಿರ್ವಹಣೆಗೆ ಮೈಸೂರು ಜಿಲ್ಲೆಗೆ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮೊದಲು ಇದರ ಲೆಕ್ಕ ಕೊಡಿ.

ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಅಂತೀರಾ, ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಟೆಂಡರ್ ಕಾಯ್ದೆ ನೋಡಿದ್ರಾ ? ಇದಾವುದಕ್ಕೂ ನಿಯಮ ಪಾಲಿಸಿಲ್ಲವೆಂದ ಮೇಲೆ, ಔಷಧಿ ಖರೀದಿಗೆ ಟೆಂಡರ್ ಕಾಯ್ದೆ ಬೇಕಾ..?

MP-prathap simha-mysore-veera savarkar-fly over- former cm- siddaramaiah- hd kumarswamy

ಖಾಸಗಿ ಆಸ್ಪತ್ರೆಯವರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. 16 ಸ್ಟೆಪ್ ಡೌನ್ ಆಸ್ಪತ್ರೆ ತೆರೆಯಲು ಕಮಿಟಿ ವರಿದಿ ನೀಡಿದೆಯಾ ? ಮೈಸೂರಿನಲ್ಲಿ ನಾಯಿಕೊಡೆಗಳಂತೆ ಸ್ಟೆಪ್ ಡೌನ್ ಆಸ್ಪತ್ರೆ ನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಇದರ ಭ್ರಷ್ಟಾಚಾರ ಪತ್ತೆ ಹಚ್ಚುವ ತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆ ಗೆ ಅನುಮತಿ ನೀಡಿದಿರಿ..?

 

key words : mysore-mp-prathap.simha-rohini-sindhoori-cold-war-bjp