ಮೈಸೂರು,ಆಗಸ್ಟ್,29,2020(www.justkannada.in): ಬೆಳಗಾವಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಿವಾಜಿ ದೇಶದ ಸ್ವಾಭಿಮಾನವಾದ್ರೆ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ. ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಾಗಬೇಕು ಎಂದು ತಿಳಿಸಿದ್ದಾರೆ.
ಮರಾಠ ಭಾಷಿಕರು ಮತ್ತು ಕನ್ನಡಿಗರ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಶಿವಾಜಿ ದೇಶಕಂಡ ಅಪ್ರತಿಮ ಹೋರಾಟಗಾರ. ಅದೇ ರೀತಿ ಕರ್ನಾಟಕಕ್ಕೆ ಬಂದರೆ ಸಂಗೊಳ್ಳಿ ರಾಯಣ್ಣ ಕೂಡ ಅಪ್ರತಿಮ ಹೋರಾಟಗಾರರೇ. ಶಿವಾಜಿ ದೇಶದ ಸ್ವಾಭಿಮಾನವಾದ್ರೆ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ. ಯಾರು ಹೆಚ್ಚು ಯಾರು ಕಡಿಮೆ ಅಂತಾ ನೋಡೋಕೆ ಕೆಲವರು ಪ್ರಯತ್ನ ಮಾಡ್ತಿದ್ದಾರೆ. ಇದು ಸರಿಯಲ್ಲ. ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಾಗಬೇಕು. ಕನ್ನಡಿಗರು, ಮರಾಠಿಗರು ಅಂತಾ ಸಾಮರಸ್ಯ ಹಾಳು ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಈ ವಿಚಾರದಲ್ಲಿ ವಿನಾಕಾರಣ ಭಾಷಾ ವೈಷಮ್ಯ ಮೂಡಿಸಬಾರದು. ಮರಾಠಿಗರು ಬೇರೆಯಲ್ಲ, ಕನ್ನಡಿಗರು ಬೇರೆಯಲ್ಲ ಇಬ್ಬರ ನಡುವೆ ವೈಮನಸ್ಸು ಮೂಡಿಸುವ ಕೆಲಸ ಮಾಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಡೀ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತಿದ್ದಾರೆ. ಎಲ್ಲಾ ಸಂಘಟನೆಗಳು ಇದಕ್ಕೆ ಸಹಕರಿಸಿ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
Key words: mysore- MP-prathap simha-Sangolli rayanna- statue-shivaji