ಸಿಬಿಐ ತನಿಖೆ ನಡೆಯುವಷ್ಟು  ಪ್ರಕರಣದಲ್ಲಿ ತೂಕವಿಲ್ಲ: ಕೋರ್ಟ್‌ ಆದೇಶ ಸುಪ್ರೀಂನಲ್ಲಿ ಪ್ರಶ್ನೆ..?

The counsel for complainant Snehamayi Krishna said that she would approach the Supreme Court after the rejection of her plea for a CBI probe into the MUDA case.

ಧಾರವಾಡ, ಫೆ.೦೭, ೨೦೨೫ : ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂಬ ಅರ್ಜಿ ತಿರಸ್ಕಾರದ ಹಿನ್ನೆಲೆ, ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಹೇಳಿಕೆ ನೀಡಿದ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು.

ಮೂರು ವಿಷಯಗಳನ್ನ ಉಲ್ಲೇಖಿಸಿ ಅರ್ಜಿ ವಜಾ ಮಾಡಲಾಗಿದೆ, ಸಿಬಿಐ ತನಿಖೆ ನಡೆಯುವಷ್ಟು ಈ ಪ್ರಕರಣದಲ್ಲಿ ತೂಕವಿಲ್ಲ ಎಂದು ನ್ಯಾಯಮೂರ್ತಿಗಳ ನಾಗಪ್ರಸನ್ನ ಅಭಿಪ್ರಾಯ. ಹೈಕೋರ್ಟ್‌ನಿಂದ ಪ್ರಮಾಣೀಕೃತ ದಾಖಲೆಗಳನ್ನ ಪಡೆದು ಪರಿಶೀಲಿಸುತ್ತೇವೆ. ಯಾವ ಆಧಾರದ ಮೇಲೆ ಅರ್ಜಿ ವಜಾ ಆಗಿದೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಅರ್ಜಿದಾರರು ಬಯಸಿದರೇ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಸ್ನೇಹಮಹಿ ಕೃಷ್ಣ ಪರ ವಕೀಲೆ ಪೂಜಾ ಸವದತ್ತಿ ಹೇಳಿಕೆ.

ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ . ನಮ್ಮ ಪರ ತೀರ್ಪು ಬರುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ವಿ , ಆದ್ರೆ ಘನ ನ್ಯಾಯಾಲಯ ನಮ್ಮ ಅರ್ಜಿಯನ್ನ ತಿರಸ್ಕರಿಸಿದೆ . ಇಂದೇ ನಾವು ಕೋರ್ಟ್ ಆದೇಶದ ಪ್ರತಿ ಪಡೆಯುತ್ತೇವೆ. ಅದನ್ನ ಸ್ಟಡಿ ಮಾಡಿ ನಂತರ ಮೇಲ್ಮನವಿ ಪಡೆಯುತ್ತೇವೆ . ಯಾವ ತಳಹದಿ ಮೇಲೆ ತೀರ್ಪು ಕೊಟ್ಟಿದ್ದಾರಂತ ಪರಿಶೀಲನೆ ಮಾಡ್ತೇವೆ.  ಸುಪ್ರೀಂ ಕೋರ್ಟ್ ಗೆ ಹೋಗೋದು ಖಚಿತ ಎಂದ ವಕೀಲ ಲಕ್ಷ್ಮಣ ಕುಲಕರ್ಣಿ.

key words: No weight in case, CBI, Court, MYSORE, MUDA

SUMMARY:

No weight in case to be investigated by CBI, Court order. The counsel for complainant Snehamayi Krishna said that she would approach the Supreme Court after the rejection of her plea for a CBI probe into the MUDA case.