ಮೈಸೂರು, ಜೂ.17, 2021 : (www.justkannada.in news ) : ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರು ಮಾಡಿರುವ ಭೂ ಕಬಳಿಕೆ ಹಾಗೂ ಭೂ ಅಕ್ರಮದ ಆರೋಪಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಇಂದು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದರು.
ನಾನು ಮುಡಾ ಅಧ್ಯಕ್ಷನಾದ ಬಳಿಕ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿಲ್ಲ. ಸರ್ವ ಸಮ್ಮತವಾದ ನಿರ್ಣಯಗಳೇ ಜಾರಿಗೆ ಬಂದಿರುವುದು. ಆದ್ದರಿಂದಲೇ ರಾಜ್ಯದ ಇತರೆ ಎಲ್ಲ ಜಿಲ್ಲೆಗಳಿಗಿಂತ ಮೈಸೂರು ನಗರದಲ್ಲೇ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ರೂಪುಗೊಂಡಿರುವುದು . ಈವರೆವಿಗೂ ಒಂದು ಲಕ್ಷಕ್ಕು ಹೆಚ್ಚು ನಿವೇಶನ ರೂಪುಗೊಂಡಿದೆ ಎಂದ ಮುಡಾ ಅಧ್ಯಕ್ಷ ರಾಜೀವ್, ಸುದ್ದಿಗೋಷ್ಠಿಯಲ್ಲಿ ಹೇಳಿದಿಷ್ಟು..
ಖಾಸಗಿ ಸಂಸ್ಥೆ, ಗೃಹ ನಿರ್ಮಾಣ ಸಂಘ ಕಾನೂನಾತ್ಮಕವಾಗಿ ಮಾಡಿದೆ. ಇದರಲ್ಲಿ 55 ಸಾವಿರ ನಿವೇಶನ ಮಾಡಿ ಹಂಚಲಾಗಿದೆ. ಇದರಲ್ಲಿ ಎಲ್ಲು ಸಹ ನಾನು ಅಧ್ಯಕ್ಷನಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ. ಇಲ್ಲಿರುವ ಎಲ್ಲ ಸದಸ್ಯರು, ಆಯುಕ್ತರು ಸೇರಿ ಎಲ್ಲರನ್ನ ಒಗ್ಗೂಡಿ ಕಾನೂನಾತ್ಮಕ ನಿರ್ಧಾರ ಕೈಗೊಂಡಿದ್ದೇವೆ.
ನನ್ನ ಜೀವನದಲ್ಲಿ ಈ ವರೆಗು ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿಲ್ಲ. ಯಾವುದೇ ಸರ್ಕಾರಿ ಭೂಮಿಯನ್ನು ನಾನು ದುರ್ಬಳಕೆ ಮಾಡಿಲ್ಲ. ಕಾನೂನು ಬಿಟ್ಟು ನಾನು ಏನು ಮಾಡಿಲ್ಲ. ಈ ಹಿಂದಿನ ಅಧಿಕಾರಿ ನನ್ನ ಹೆಸರು ಪ್ರಸ್ತಾಪಿಸಿ ಏಕವಚನ ಪದ ಪ್ರಯೋಗ ಮಾಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ, ಆ ಬಗ್ಗೆ ನಾನು ಮಾತಾಡಲ್ಲ. ನಾನು ಏನು ಎಂಬುದು ಹೇಳುವ ಸಮಯವಿದು. ಕೋವಿಡ್ ವೇಳೆ ಸಾಕಷ್ಟು ಸಮಸ್ಯೆಗೆ ಸ್ಪಂದನೆ ನೀಡಿದ್ದೇನೆ.
10 ವರ್ಷಗಳಲ್ಲಿ ಹೇಗಿದ್ದವರು ಹೇಗಾಗಿದ್ದಾರೆ ಎಂದು ನನ್ನನ್ನು ಪ್ರಶ್ನಿಸಿದ್ದಾರೆ. ನಾನು ಸರ್ಕಾರದ ಯಾವುದೇ ಒಂದು ಜಾಗವನ್ನು ಇಲ್ಲಿಯವರೆಗೆ ಖರೀದಿಸಿಲ್ಲ. ಸಾವಿರಾರು ಮನೆಗಳನ್ನ ನಿರ್ಮಿಸಿ ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲೇ ಜನರಿಗೆ ವಸತಿ ನೀಡಿರುವ ತೃಪ್ತಿ ನನಗಿದೆ. ಮೈಸೂರು ಹಸಿರುಕರಣಕ್ಕಾಗಿ ನನ್ನ 75 ಲಕ್ಷ ರೂ. ಸ್ವಂತ ಹಣದಿಂದ ಗಿಡಗಳನ್ನ ನೆಡುವ ಕೆಲಸ ಮಾಡುತ್ತಿದ್ದೇನೆ.
ಮೈಸೂರಿನ ಜನ ಅರ್ಥ ಮಾಡಿಕೊಳ್ಳಬೇಕು :
ಮೌಢ್ಯ, ಜಾತಿ ಧರ್ಮದ ಎಲ್ಲೇ ಮೀರಿ ಕೆಲಸ ಮಾಡಿದ್ದೇನೆ. ಪ್ರಧಾನಿ ಮೋದಿ ಕರೆಗೆ ನೂರಾರು ಅಭಿಯಾನ ಮಾಡಿದ್ದೇನೆ. ನನಗೆ ಪ್ರಚಾರದ ಹುಚ್ಚೆನಿಲ್ಲ. ನನ್ನ ಎಲ್ಲ ವ್ಯವಹಾರಗಳು, ಎಲ್ಲಾ ಕಾನೂನಿನ ಮೂಲಕವೇ ನಡೆಯುತ್ತಿದೆ. ನನ್ನ ವ್ಯವಹಾರಗಳಿಗೆ ತೆರಿಗೆ ಕಟ್ಟುತ್ತ, ನನ್ನ ವ್ಯವಹಾರ ನಾನು ಮಾಡುತ್ತಿದ್ದೇನೆ. ಆದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳು ಬಂದಿದೆ. ಮೈಸೂರಿನ ಜನ ಯಾರೋ ಹೇಳಿದ್ದನ್ನ ನಂಬಿಕೊಳ್ಳುವ ಬದಲು ವಾಸ್ತವಾಗಿ ನಾನೇನು ಕೆಲಸ ಮಾಡಿದ್ದೇನೆ ಅನ್ನೋದನ್ನ ಗಮನಿಸಬೇಕು. ಪತ್ರಿಕಾಗೋಷ್ಠಿಯಲ್ಲಿ ಹೆಚ್.ವಿ ರಾಜೀವ್ ಹೇಳಿಕೆ
ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆಡಿಯೋದಲ್ಲಿ ಸಾರಾ ಮಹೇಶ್ ಹಾಗೂ ರಾಜೀವ್ ಬ್ಯೂಸಿನೆಸ್ ಪಾರ್ಟನರ್ಸ್ ಎಂದಿರುವ ವಿಷಯ ಹೆಸರು ಪ್ರಸ್ತಾಪಿಸಿ, ಸಾ.ರಾ ಮಹೇಶ್ ನನಗೂ ಒಂದು ರೂಪಾಯಿ ವ್ಯವಹಾರವಿಲ್ಲ. ಅವರೊಂದಿಗೆ ಯಾವುದೇ ವ್ಯವಹಾರವನ್ನು ನಡೆಸಿಲ್ಲ. ನನ್ನ ಹೆಸರು ಪ್ರಸ್ತಾಪದ ಬಗ್ಗೆ ನನ್ನ ಆಪ್ತರ ಹಾಗೂ ಪಕ್ಷದ ಹಿರಿಯರ ಜೊತೆ ಮಾತುಕತೆ ನಡೆಸಿ ಬಳಿಕ ಕಾನೂನಿನ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದರು.
ನನ್ನ ಹೆಸರು ಪ್ರಸ್ತಾಪಿಸಿರುವ ಬಗ್ಗೆ ನೀವು ಅವರನ್ನೆ ಪ್ರಶ್ನಿಸುವುದು ಸೂಕ್ತ. ಲಿಂಗಾಂಬುದಿಪಾಳ್ಯದಲ್ಲಿ ನನ್ನದು 3ಎಕರೆ ಜಮೀನಿದೆ. ಅದರಲ್ಲಿ ಯಾವುದೇ ಲೋಪವಿಲ್ಲ, ಅದು ನನ್ನ ತಂದೆಯ ಆಸ್ತಿ . ಹೆಚ್.ವಿ ರಾಜೀವ್ ಸ್ಪಷ್ಟನೆ.
ಕೇರ್ಗಳ್ಳಿ ಬಡಾವಣೆ ತನಿಖೆ :
ಮೈಸೂರಿನ ಕೇರ್ಗಳ್ಳಿ ಬಡಾವಣೆ ಸಂಪೂರ್ಣ ತನಿಖೆ. 2013ರ ವರೆಗು ಈ ಬಡಾವಣೆಗೆ ಪರಿಹಾರ ನೀಡಲಾಗಿದೆ. ಭೂಮಿ ಇಲ್ಲದಿದ್ದರು ಪರಿಹಾರ ಪಡೆದಿದ್ದಾರೆ. ಇಬ್ಬರು 21 ಲಕ್ಷ ರೂ. ಪರಿಹಾರದ ಹಣ ಪಡೆದಿದ್ದಾರೆ. ಆದರೆ ಒಟ್ಟು 12 ಎಕರೆಗೆ ಆರ್‌ಟಿಸಿ ಇದ್ದರು , ಭೂಮಿ ಇಲ್ಲದಿರುವುದು ಗೊತ್ತಾಗಿದೆ. ಇದರಲ್ಲಿ 7 ಎಕರೆಗೆ ಪರಿಹಾರದ ಹಣ ಪಡೆದಿದ್ದಾರೆ. ಹಾಗಾಗಿ ಈ 2013ರ ಈ ಯೋಜನೆಯ ಸಂಪೂರ್ಣ ತನಿಖೆಗೆ ಆದೇಶ ನೀಡುತ್ತಿದ್ದೇನೆ.
ನಿರ್ಗಮಿತ ಡಿಸಿಗೆ ದೂರು ಕೊಟ್ಟಿದ್ದು ಇದೇ ವಿಚಾರ. ಭೂಮಿ ಇಲ್ಲದಿದ್ದರು ಪರಿಹಾರ ಪಡೆದಿದ್ದಾರೆಂದು ದೂರು ಕೊಟ್ಟಿದ್ದಾರೆ. ಹಾಗಾಗಿ ಈ ದೂರಿಗಿಂತ ಮುನ್ನ ನಾನು ನಮ್ಮ ಅಧಿಕಾರಿಗಳು ಈ ಸ್ಕೆಚ್ ಮಾಡಿಸಿದ್ದೇವೆ. ಈ ಕೇರ್ಗಳ್ಳಿಯ ಲ್ಯಾಂಡ್ ಸ್ಕೆಚ್ ಮಾಡಿಸಿದ ಬಳಿಕ ಈ ಸುಳ್ಳು ಮಾಹಿತಿ ಗೊತ್ತಾಗಿದೆ. ಹಾಗಾಗಿ ಇದನ್ನ ಮುಂದೆ ಹೇಗೆ ತನಿಖೆ ಮಾಡಿಸಬೇಕೆಂದು ಸಭೆ ಗಮನಕ್ಕೆ ತಂದು ಮಾಡುತ್ತೇವೆ. ನನ್ನ ಮೇಲಿನ ಹಿಂದಿನ ಡಿಸಿಯ ಆರೋಪ ನಿರಾಧಾರ ಎಂದ ರಾಜೀವ್.
ENGLISH SUMMARY….
“I don’t have any dealing with Sa. Ra. Mahesh”: MUDA Chairman Rajiv clarifies
Mysuru, June 17, 2021 (www.justkannada.in): Mysore Urban Development Authority (MUDA) Chairman H.V. Rajiv today gave his clarification on the allegations made by former Deputy Commissioner of Mysuru Rohini Sindhuri on illegal land encroachment.
“I have not taken any decisions on my own after becoming MUDA Chairman. All the decisions have been taken only after taking consent by all the members. It is the reason why Mysuru today has the neatest system compared to other districts in the State. More than one lakh sites have been formed,” explained the MUDA Chairman.
Addressing a press meet in Mysuru today he said, “The private association and house building associations have been formed legally, through which 55,000 sites have been distributed. I have not taken one-sided decisions anywhere. All the decisions have been taken with the consent of all the members. I have not formed even one revenue layout in my life. I am not involved in any illegal government land scam. I have not done anything outside the law. It only shows her culture, I don’t like to speak about it. This is the time to reveal what I am. I have responded a lot to COVID problems also,” he explained.
Keywords: MUDA Chairman/ H.V. Rajiv/ former DC Rohini Sindhuru/ No dealing with Sa. Ra. Mahesh/ clarifies
key words : mysore-MUDA-land-mafia-rajeeva-sa.ra.mahesh