ಮೈಸೂರು,ಏಪ್ರಿಲ್,5,2021(www.justkannada.in): ನಟ ಮುಖ್ಯಮಂತ್ರಿ ಚಂದ್ರು ಮತ್ತು ಮುಖ್ಯಮಂತ್ರಿ ನಾಟಕದ ನಿರ್ದೇಶಕರಾದ ಬಿ.ವಿ ರಾಜರಾಮ್ ಅವರಿಗೆ ಏಪ್ರಿಲ್ 18 ರಂದು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೈಸೂರು ನಗರಾಧ್ಯಾಕ್ಷ ಕೆ.ಎಸ್ ಶಿವರಾಮು ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ನಗರಾಧ್ಯಾಕ್ಷ ಕೆ.ಎಸ್ ಶಿವರಾಮು, ಮೈಸೂರಿನ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಚಂದ್ರುರವರು ಸತತವಾಗಿ 41 ವರ್ಷಗಳಿಂದ ರಂಗದ ಮೇಲೆ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿಯಾಗಿ ಅಭಿನಯಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಹಾಗಾಗಿ ಈ ಇಬ್ಬರು ಕಲಾವಿದರಿಗೆ ಗೌರವ ಸಮರ್ಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಈ ಸಂದರ್ಭ ಮುಖ್ಯಮಂತ್ರಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಇಡೀ ವರ್ಷ ನಾಟಕ ಪ್ರದರ್ಶನ ನೀಡಲು ಚಿಂತನೆ- ಮುಖ್ಯಮಂತ್ರಿ ಚಂದ್ರು..
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮುಖ್ಯಮಂತ್ರಿ ನಾಟಕ ಆರಂಭಿಸಿದಾಗ ಇಷ್ಟೋಂದು ರೆಸ್ಪಾನ್ಸ್ ಸಿಗುತ್ತೆ ಅಂತ ಗೊತ್ತಿರಲಿಲ್ಲ. 1980ರಲ್ಲಿ ಕಲಾಗಂಗೋತ್ರಿ ಸಂಸ್ಥೆಯ ಮೂಲಕ ಪ್ರಾರಂಭವಾದ ನಾಟಕ. ಕಲಾಗಂಗೋತ್ರಿ ಸಂಸ್ಥೆ 50 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆ ಇಡೀ ವರ್ಷ ನಾಟಕ ಪ್ರದರ್ಶನ ನೀಡಲು ಚಿಂತನೆ ನಡೆಸಿದ್ದೇವೆ. ಮುಖ್ಯಮಂತ್ರಿ ನಾಟಕ ಗಿನ್ನಿಸ್ ದಾಖಲೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ನಾಟಕದ ನಡೆದು ಬಂದ ಸಂಪೂರ್ಣ ದಾಖಲೆ ಒದಗಿಸಬೇಕು. ಎಲ್ಲವನ್ನೂ ಹುಡುಕಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
1980ರಿಂದಲೂ ಮುಖ್ಯಮಂತ್ರಿ ಪಾತ್ರವನ್ನು ಒಬ್ಬನೇ ನಿರ್ವಹಿಸಿದ್ದೇನೆ. ರಾಜ್ಯಾದ್ಯಂತ 730ಕ್ಕೂ ಪ್ರದರ್ಶನ ಈಗಾಗಲೇ ನೀಡಿದ್ದೇವೆ. ನಿನ್ನೆ ತಾನೆ ಮತ್ತೊಂದು ನಾಟಕ ಪ್ರಾರಂಭಿಸಿದ್ದೇವೆ. ಇದು ಕೂಡಾ ಮುಖ್ಯಮಂತ್ರಿ ನಾಟಕವನ್ನೇ ಹೋಲುವ ರಾಜಕೀಯ ಕುರಿತ ನಾಟಕವಾಗಿದೆ. ಎಂದಾದರೂ ಒಮ್ಮೆ ಮೈಸೂರಿನಲ್ಲಿ ಈ ನಾಟಕ ಪ್ರದರ್ಶನ ಮಾಡುತ್ತೇವೆ ಎಂದು ಸಂವಾದ ಕಾರ್ಯಕ್ರಮದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
Key words: mysore-mukyamantri chandru- BV Rajaram –mukyamantri -drama