ಮೈಸೂರು,ಜನವರಿ,19,2022(www.justkannada.in): ಪಾರಿವಾಳ ವಿಚಾರದಲ್ಲಿ ಗಲಾಟೆ ನಡೆದು ಓರ್ವ ಕೊಲೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗೋವಿಂದರಾಜು (49) ಕೊಲೆಯಾದ ವ್ಯಕ್ತಿ. ಮೈಸೂರಿನ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಕೇರಿಯಲ್ಲಿ ಈ ಘಟನೆ ನಡೆದಿದೆ. ಮನೋಜ್ ನಾಯಕ್, ಜಯಶಂಕರ್ ಎಂಬುವವರನ್ನ ಪೊಲೀಸರ ವಶಕ್ಕೆ ಪಡೆದಿದ್ದು, ವಿನಾಯಕ್, ಪ್ರಮೋದ್ನಾಯಕ್ ಎಸ್ಕೇಪ್ ಆಗಿದ್ದಾರೆ.
ಈ ಯುವಕರು ಎದುರುಬದುರು ಮನೆಯಲ್ಲಿ ಪಾರಿವಾಳ ಸಾಕಿದ್ದರು. ಸಂಕ್ರಾಂತಿ ಹಬ್ಬದ ರಾತ್ರಿಯಂದು ಉಲ್ಲಾಸ್ ಎಂಬತಾನ 38 ಪಾರಿವಾಳಗಳು ಕಳ್ಳತನವಾಗಿತ್ತು. ಈ ವೇಳೆ ಪಾರಿವಾಳ ಕಳ್ಳತನವಾಗಿದ್ದಕ್ಕೆ ಉಲ್ಲಾಸ್ ಮತ್ತು ಮನೆಯವರು ಬೈದುಕೊಂಡು ಸುಮ್ಮನಾಗಿದ್ದರು. ಉಲ್ಲಸ್ ಕೊಲೆಯಾದ ಗೋಂವಿಂದರಾಜು ಪುತ್ರನಾಗಿದ್ದು, ಎದುರು ಮನೆಯಲ್ಲಿದ್ದ ವಿನಾಯಕ್, ಪ್ರಮೋದ್ನಾಯಕ್, ಜಯಶಂಕರ್, ಮನೋಜ್ ನಾಯಕ್, ವಿಜಯ್(ಕುಪ್ಪ), ಅದ್ನಾನ್ ಪಾರಿವಾಳ ಕದ್ದಿದ್ದಾರೆಂದು ಆರೋಪಿಸಲಾಗಿತ್ತು.
ನಿನ್ನೆ ವಿನಾಯಕ್ ಮನೆಯಲ್ಲಿ ಪಾರಿವಾಳಗಳಿರಬಹುದೆಂದು ಉಲ್ಲಾಸ್ ಸ್ನೇಹಿತ ಪ್ರಮೋದ್ ಪರಿಶೀಲನೆ ಮಾಡಲು ತೆರಳಿದ್ದರು. ಈ ವೇಳೆ ಪ್ರಮೋದ್ ಮೇಲೆ ವಿನಾಯಕ್, ಜಯಶಂಕರ್, ಪ್ರಮೋದ್ನಾಯಕ್, ಮನೋಜ್ನಾಯಕ್ ಹಲ್ಲೆ ಮಾಡಿದ್ದಾರೆ. ನಂತರ ಪ್ರಮೋದ್ ಮೇಲೆ ಹಲ್ಲೆ ನಡೆಸಿದ್ದನ್ನ ಉಲ್ಲಾಸ್ ತಂದೆ ಗೋವಿಂದರಾಜು ಪ್ರಶ್ನೆ ಮಾಡಿದ್ದಾರೆ. ನಂತರ ಗೋವಿಂದರಾಜು ಮನೆ ಬಳಿ ಬಂದ ನಾಲ್ವರು ಗೋವಿಂದರಾಜು ಮತ್ತು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಗೋವಿಂದರಾಜುರನ್ನ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗೋವಿಂದರಾಜು ಮೃತಪಟ್ಟಿದ್ದಾರೆ.ಕೆ.ಆರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Key words: mysore- murder- man- pigeon