ಕೆಲಸ ಮಾಡಲು ಕಚೇರಿ ಇಲ್ಲವೆಂಬ ಚಿಂತೆ ಇದ್ರೆ ಬಿಟ್ಟು ಬಿಡಿ.

ಮೈಸೂರು(Guest Article):  ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐಟಿ-ಬಿಟಿ ಕ್ಷೇತ್ರಗಳು ಹೆಚ್ಚಾಗುತ್ತಿದ್ದಂತೆ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದೇ ರೀತಿ ಸಣ್ಣ ಸ್ಟಾರ್ಟ್‌ಅಪ್‌ ಗಳು, ಸ್ವಯಂ ಉದ್ಯೋಗಿಗಳ ಪ್ರಮಾಣವು ದ್ವಿಗುಣವಾಗುತ್ತಿರುವುದರಿಂದ ಸ್ವಂತ ಕಚೇರಿಯನ್ನು ಸ್ಥಾಪಿಸಲು ಅಥವಾ ಸಕಾಲಕ್ಕೆ ಕಚೇರಿ ಸಿಗದೆ ಪರದಾಡುತ್ತಿರುವುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ಐಟಿ-ಬಿಟಿ ನೌಕರರು ಕೆಲಸ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಇಂತಹ ಹಲವಾರು ಸಮಸ್ಯೆಗಳನ್ನು ದೂರ ಮಾಡಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಕಾಲಿಟ್ಟಿರುವ ಮೈ ಆಫೀಸ್ ಸ್ಪೇಸ್ (www.mysofficespace.in) ಅತ್ಯಾಧುನಿಕ ಶೈಲಿಯಲ್ಲಿ ಕಚೇರಿ ಸೌಲಭ್ಯವನ್ನು ಒದಗಿಸುವ ಸೇವೆ ಆರಂಭಿಸಿದೆ.

ಈ ಮೂಲಕ ಒಂದು ದಿನ, ತಿಂಗಳು ಅಥವಾ ಒಂದು ವರ್ಷಕ್ಕಾದರೂ ಸದಸ್ಯತ್ವದ ರೂಪದಲ್ಲಿ ಪಡೆದುಕೊಂಡು ಉತ್ತಮ ವಾತಾವರಣದೊಂದಿಗೆ ಕಚೇರಿ ಕೆಲಸ ನಿರ್ವಹಿಸಬಹುದಾಗಿದೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್‌ ಗಳು ಬಂದ ಮೇಲೆ ಸ್ವತಂತ್ರ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳು ಕೈಗೆಟುಕುವ ಮತ್ತು ಕೆಲಸ ಮಾಡಲು ಅನುಕೂಲಕರವಾದ ಸ್ಥಳವನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಅನೇಕ ಉದ್ಯಮಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಅವರು ಸಭೆಗಳಿಗೆ ಹೆಚ್ಚು ವೃತ್ತಿಪರ ಕಾರ್ಯಕ್ಷೇತ್ರವನ್ನು ಬಯಸುತ್ತಾರೆ. ಮನೆಯಿಂದ ಕೆಲಸವನ್ನು ಮಾಡಲು ತೊಂದರೆ, ಕಿರಿಕಿರಿ ಅನುಭವಿಸುವ ಉದ್ಯೋಗಿಗಳು ಪ್ರತ್ಯೇಕ ಕೆಲಸದ ವಾತಾವರಣವನ್ನು ಬಯಸುತ್ತಾರೆ. ಇದಕ್ಕಾಗಿ ಹಲವಾರು ಕಡೆಗಳಲ್ಲಿ ಕಚೇರಿ ತೆರೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಬೇಕು. ಇದಲ್ಲದೆ, ಸೂಕ್ತ ಜಾಗ ಸಿಗದಿದ್ದರೆ ಮತ್ತಷ್ಟು ಸಮಸ್ಯೆ. ತಮಗೆ ಬೇಕಾದ ಸ್ಥಳ ಸಿಕ್ಕಿದರೂ ವರ್ಷದ ಮಟ್ಟಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ತೊಡಕಾಗಲಿದೆ. ಹೀಗಾಗಿಯೇ ಕೆಲವರು ನಿರಾಶೆ ಅನುಭವಿಸುತ್ತಿದ್ದರಿಂದ ಬೆಂಗಳೂರು, ಚೆನ್ನೈ, ಮುಂಬಯಿ ಮೊದಲಾದ ನಗರಗಳಲ್ಲಿ ಮೈ ಆಫೀಸ್ ಸ್ಪೇಸ್ ಸಿಸ್ಟಂ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಿಕೊಂಡು ಬರಲಾಗಿದೆ.

ಇದೀಗ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಹ್ಯಾಬಿಟೇಟ್ ಮಾಲ್‌ ನಲ್ಲಿ ಮೈ ಆಫೀಸ್ ಸ್ಪೇಸ್(www.mysofficespace.in) ಸದ್ದಿಲ್ಲದೆ ಶುರು ಮಾಡಿದೆ. ಅತ್ಯಾಧುನಿಕ ಶೈಲಿಯಲ್ಲಿ ಒಬ್ಬರು, ಇಬ್ಬರು, ಹತ್ತು ಮಂದಿ, 50 ಮಂದಿ, ನೂರು ಮತ್ತು 150 ಮಂದಿ ಕುಳಿತುಕೊಂಡು ಕೆಲಸ ಮಾಡುವ ರೀತಿಯಲ್ಲಿ ಫ್ಲೆಕ್ಸಿ ಡೆಸ್ಕ್, ಡೆಡಿಕೇಟೆಡ್ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಒಬ್ಬರಾದರೂ ಸರಿ, ನೂರು ಮಂದಿಯನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಿದರೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಪೀಠೋಪಕರಣ, ಕುರ್ಚಿ, ಟೇಬಲ್, ಇಂಟರ್‌ನೆಟ್ ಸೌಲಭ್ಯ ಮೊದಲಾದ ವ್ಯವಸ್ಥೆ ಇದೆ. ಇದಲ್ಲದೆ ಬೋರ್ಡ್ ರೂಮ್, ವಿಡೀಯೋ ಕಾನ್ಫ್ ರೆನ್ಸ್ ಮಾಡಲು ಪ್ರತ್ಯೇಕ ವ್ಯವಸ್ಥೆ ಕೂಡ ಇದೆ. ಐಟಿ-ಬಿಟಿಯಲ್ಲಿ ಕೆಲಸ ಮಾಡುವ ನೌಕರರು ರಜೆ ಹಾಕಿ ಮನೆಗೆ ಬಂದಾಗ ಈ ಕಚೇರಿಯನ್ನು ಬಳಸಿಕೊಳ್ಳುವುದಕ್ಕೆ ದಿನದ ಅಥವಾ ತಿಂಗಳ ರೂಪದಲ್ಲೂ ಸದಸ್ಯತ್ವ ಪಡೆಯಬಹುದಾಗಿದೆ.

ಯಾವಾಗ ಬೇಕಾದರೂಬರಬಹುದು, ಹೋಗಬಹುದೆಂಬ ರೀತಿಯಲ್ಲಿ ಟೇಬಲ್‌ ನಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸಮಾಡಬಹುದು. ಅದೇ ರೀತಿ ಹೊರಗಿನಿಂದ ಬರುವ ಖಾಸಗಿ ಕಂಪೆನಿಗಳು ಕಚೇರಿ ಆರಂಭಿಸುವ ತನಕ ಕಾಯದೆ ತುರ್ತು ಕೆಲಸ ಶುರು ಮಾಡಿಸಲು ವರ್ಷದ ಬಾಡಿಗೆಯಾಗಿ ಪಡೆಯಬಹುದಾಗಿದೆ. ಇದರಿಂದಾಗಿ ಅನೇಕ ಸಣ್ಣ ಸಣ್ಣ ಕಂಪನಿಗಳು ಇದನ್ನು ಬಳಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಇಂದು ಕಚೇರಿಗೆ ಜಾಗ ಹುಡುಕುವುದು, ಕಚೇರಿಗೆ ಪೀಠೋಪಕರಣಗಳನ್ನು ಅಳವಡಿಸುವುದು ಮತ್ತು ಅದಕ್ಕೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕುವುದು ದುಸ್ತರವಾಗಿದೆ. ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಪೂರಕ ವಾತಾವರಣದಲ್ಲಿ ಕೆಲಸ ಮಾಡಲು ಬಯಸುವುದರಿಂದ ಅಂತಹವರು ಸದಸ್ಯತ್ವ ಪಡೆದು ಕೆಲಸ ಮಾಡಬಹುದು. ಪ್ರಮುಖ ಕಂಪೆನಿಗಳು ಸದಸ್ಯತ್ವ ಪಡೆದು ಬಳಸುತ್ತಾರೆ. ಅದೇ ರೀತಿ ರಜೆಯ ಮೇಲೆ ಬರುವವರು ಬಂದು ಕೆಲಸ ಮಾಡಿ ಹೋಗುತ್ತಾರೆ. ಉತ್ತಮ ವಾತಾವರಣದಲ್ಲಿ ಕೆಲಸ ಮಾಡುವ ನೌಕರರಿಗೆ ಬೇಕಾದ ಎಲ್ಲಾ ಸೌಲಭ್ಯವಿದೆ. ಬೋರ್ಡ್ ರೂಂ ಕೂಡ ಇರುವುದರಿಂದ ಇಲ್ಲಿಂದಲೇ ಎಲ್ಲರೊಂದಿಗೆ ಮಾತನಾಡಿ ಚರ್ಚೆ ಮಾಡಬಹುದಾಗಿದೆ.

 

-ಬಿ.ಮಂಜುನಾಥ್. ಮೈ ಆಫೀಸ್ ಸ್ಪೇಸ್ ಮ್ಯಾನೇಜಿಂಗ್ ಡೈರಕ್ಟರ್ 

Key words: mysore- My Office Space- no worried – work