ಮೈಮೂಲ್ ನೇಮಕಾತಿ ವಿವಾದ : ಡಿ.4 ರೊಳಗೆ ವೆಬ್ ಸೈಟ್ ನಲ್ಲಿ ಉತ್ತರ ಪತ್ರಿಕೆ ಪ್ರಕಟಿಸಲು ಕೋರ್ಟ್ ಸೂಚನೆ.

ಮೈಸೂರು, ಡಿ.01, 2020 : (www.justkannada.in news ) ಮೈಮುಲ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿರುವ ಪರೀಕ್ಷೆಯ ಒಎಂಆರ್ ಶೀಟ್ಸ್ ಹಾಗೂ ಉತ್ತರಪತ್ರಿಕೆಯನ್ನು ಡಿ.೪ರೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್ ಆದೇಶ.

ಮೈಮುಲ್‌ನಲ್ಲಿ ಹುದ್ದೆಗಳ ನೇಮಕಕ್ಕೆ ನಡೆದಿರುವ ಪರೀಕ್ಷಾ ಕ್ರಮದಲ್ಲಿ ಅವ್ಯವಹಾರವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದೇ ವೇಳೆ ಪರೀಕ್ಷೆಗೆ ಹಾಜರಾಗಿದ್ದ ೧೮ ಸಾವಿರ ಅಭ್ಯರ್ಥಿಗಳ ಉತ್ತರಪತ್ರಿಕೆಯನ್ನು ಪ್ರಕಟಿಸದೆ ಇರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಆದರೆ, ಮೈಮುಲ್ ಪರ ವಕೀಲರು ಸಹಕಾರ ಸಂಘಗಳ ಕಾಯಿದೆ ಪ್ರಕಾರ ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ತಮ್ಮ ವಾದ ಮಂಡಿಸಿದ್ದರು.

logo-justkannada-mysore

ಆದರೆ, ಪರೀಕ್ಷಾ ಫಲಿತಾಂಶ ಪ್ರಕಟಿಸುವಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪರಿಗಣಿಸಿದ ಕೋರ್ಟ್, ಡಿ. ೪ ರೊಳಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಸೂಚಿಸಿದೆ. ಜತೆಗೆ ಫಲಿತಾಂಶ ಪ್ರಕಟಿಸಿದ ಬಳಿಕ ಏನಾದರೂ ಆಕ್ಷೇಪಣೆ ಇದ್ದಲ್ಲಿ ಡಿ. ೮ ರೊಳಗೆ ಸಲ್ಲಿಸುವಂತೆ ಹೇಳಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾ.ದಳ ಮುಖಂಡ ಎಂ.ಟಿ.ಕುಮಾರ್ ಹೇಳಿದಿಷ್ಟು..

green-fireworks-sale-high-court-dissatisfaction-government-order

ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸುವಾಗ ೧೮೭ಹುದ್ದೆಗಳ ಜತೆಗೆ ೨೫ ಹುದ್ದೆಗಳನ್ನು ಕಾನೂನುಬಾಹಿರವಾಗಿ ಸೇರಿಸಿದ್ದನ್ನು ಗಂಭೀರವಾಗಿ ಕೋರ್ಟ್ ಪರಿಗಣಿಸಿದ್ದರಿಂದ ೨೫ ಹೆಚ್ಚುವರಿ ಹುದ್ದೆ ಕೈಬಿಡಲು ಮೈಮುಲ್ ಪರ ವಕೀಲರು ಒಪ್ಪಿಕೊಂಡಿದ್ದಾರೆ. ಆದರೆ, ೧೮೭ ಹುದ್ದೆಗಳ ನೇಮಕಕ್ಕೆ ಅಭ್ಯರ್ಥಿಗಳು ಅರ್ಹರು ಅಥವಾ ಅನರ್ಹರೋ ಎನ್ನುವುದನ್ನು ೧೬ ರಂದು ಪರಿಶೀಲಿಸಿ ನಂತರ ತೀರ್ಪು ನೀಡಲಿದೆ ಎಂದರು.

oooo

key words : mysore-mymul-appointment-court-OMR-answer.sheet-upload-website