WOW..400 ವರ್ಷಗಳ ಕಲ್ಯಾಣಿ ಪತ್ತೆಯಾಯ್ತು ರಾಜರೂರಿನಲ್ಲಿ…!

 

ಮೈಸೂರು, ಅ.23, 2021 : (www.justkannada.in news) : ಸರಿ ಸುಮಾರು ನಾನೂರು ವರ್ಷಗಳಷ್ಟು ಹಿಂದಿನ ಕಲ್ಯಾಣಿಯೊಂದು ಇದೀಗ ಮತ್ತೆ ಸಿಕ್ಕಿದೆ. ಅದು ಪಿಡಿಒ ಒಬ್ಬರ ಜಸ್ಟ್ ಒಂದು ಸಣ್ಣ ಕುತೂಹಲ, ಉತ್ಸಾಹದ ಫಲವಾಗಿ ಕಲ್ಯಾಣಿ ಪತ್ತೆಯಾಗಿದೆ.

ಮೈಸೂರು ಹೊರ ವಲಯದ ನಾಗವಾಲದಲ್ಲಿ ಈ ಕಲ್ಯಾಣಿ ಪತ್ತೆಯಾಗಿರುವುದು ಮಾತ್ರವಲ್ಲ, ಇದೀಗ ಕಲ್ಯಾಣಿಯನ್ನು ಸಂರಕ್ಷಿಸಿ ಅಲ್ಲಿ ನೀರು ತುಂಬಂತೆಯೂ ಮಾಡಲಾಗಿದೆ. ಇದರ ರೂವಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಶೋಭಾ ದಿನೇಶ್.
ಈ ಬಗ್ಗೆ ಜಸ್ಟ್ ಕನ್ನಡ ,  ಪಿಡಿಒ ಶೋಭಾ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದಿಷ್ಟು…

ಪಂಚಾಯ್ತಿ ಅಧ್ಯಕ್ಷರಾದ ಸಿ.ನರೇಂದ್ರ ಅವರ ಜತೆಗೆ ನಾಗವಾಲ ಸಮೀಪದ ಅಂದಾಜು 25 ಎಕರೆ ಪ್ರದೇಶ ವಿಸ್ತೀರ್ಣದ ಕೆರೆ ಸಮೀಕ್ಷೆಗೆ ತೆರಳಿದ್ದೇ. ಆಗ ಅವರು, ನಾನು ಚಿಕ್ಕವನಿದ್ದಾಗ ಈ ಕೆರೆ ಬಳಿ ಕಲ್ಯಾಣಿಯೊಂದನ್ನು ನೋಡಿದ್ದೆ . ನೂರಾರು ವರ್ಷಗಳ ಹಳೇಯ ಕಲ್ಯಾಣಿ ಅದು ಎಂಬುದಾಗಿ ಹಿರಿಯರು ಹೇಳುತ್ತಿದ್ದರು. ಅಲ್ಲಿಂದಲೇ ನೀರು ತರುತ್ತಿದ್ದ ವಿಷಯವನ್ನು ನೆನಪಿಸಿಕೊಂಡರು. ನೂರಾರು ವರ್ಷದ ಹಿಂದಿನ ಒಂದು ಕಲ್ಯಾಣಿ ಈ ಜಾಗದಲ್ಲಿತ್ತು ಅಂತ ಕೇಳ್ಪಟ್ಟಾಗ ನೋಡೋ ಉಮ್ಮೇದಿ ಶುರು ಆಯ್ತು. ಸರಕಾರದ ‘ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಯಡಿ ಈ ಕೆರೆ ಸಹ ಸೇರ್ಪಡೆಗೊಂಡಿತ್ತು. ಜತೆಗೆ ನರೇಗಾ ಯೋಜನೆಯಡಿ ‘ ಜಲ ಶಕ್ತಿ ಅಭಿಯಾನ’ ದಲ್ಲಿ ಕೆರೆ ಉಳೆತ್ತಿ ಅದನ್ನು ಅಭಿವೃದ್ಧಿ ಪಡಿಸುವ ಅವಕಾಶವಿತ್ತು. ಹಾಗಾಗಿ ಪಂಚಾಯ್ತಿ ಪ್ರಮುಖರ ಜತೆ ಸಭೆ ಮಾಡಿ 9 ಲಕ್ಷದ ಯೋಜನೆ ಸಿದ್ಧಪಡಿಸಲಾಯಿತು. ಈ ಪೈಕಿ ಕೆರೆ ಉಳೆತ್ತಿ ಸ್ವಚ್ಛಗೊಳಿಸಲು 3 ಲಕ್ಷ ರೂ, ಕಲ್ಯಾಣಿ ಸುತ್ತಲು ಸೋಪಾನ್ ಕಟ್ಟೆ ನಿರ್ಮಾಣಕ್ಕೆ 3 ಲಕ್ಷ ರೂ ಹಾಗೂ ಸುತ್ತಲು ತಂತಿ ಬೇಲಿ ಹಾಕಲು 3 ಲಕ್ಷ ರೂ. ನಿಗಧಿಪಡಿಸಲಾಯಿತು.

ಕೆರೆಗೆ ಮಳೆ ನೀರು ಹರಿಯುವ ಕಾಲುವೆಗಳಲ್ಲಿ ಬೋಲ್ಡರ್ ಚೆಕ್ ಡ್ಯಾಂ ಮತ್ತು ನೀರು ಮರು ಪೂರಣ ಗುಂಡಿಗಳ ನಿರ್ಮಾಣ. ಚಿತ್ರದಲ್ಲಿ ಪಂಚಾಯ್ತಿ ಅಧ್ಯಕ್ಷ ಸಿ.ನರೇಂದ್ರ.

ಯೋಜನೆಯಂತೆ ಕಾಮಗಾರಿ ಆರಂಭಿಸಲಾಯಿತು. ಆರಂಭದಲ್ಲಿ ಆಮೆ ಗತಿಯಲ್ಲಿ ಸಾಗುತ್ತಿತ್ತು. ಯಾವಾಗ ಕಲ್ಯಾಣಿ ಇರುವಿಕೆ ಗೋಚರಿಸಿತೋ ಆಗ ಉತ್ಸಾಹ ಮೂಡಿತು. ಜತೆಗೆ ಕೆಲದಿನಗಳ ಬಳಿಕ ಮಳೆ ಬಂದು ಕೆರೆಯಲ್ಲಿ ನೀರು ತುಂಬಲು ಆರಂಭಿಸಿತು. ಆಗಲೇ ಕಲ್ಯಾಣಿಯಲ್ಲಿ ಸಹ ನೀರು ಉಕ್ಕಲು ಆರಂಭಿಸಿತು. ಇದು ಎಲ್ಲರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಆ ಮೂಲಕ ಯೋಜನೆ ಯಶಸ್ವಿಯಾಗಿ ಕಾರ್ಯಗತವಾಯಿತು ಎಂದರು.

ಕಲ್ಯಾಣಿ ಪತ್ತೆ ಹಾಗೂ ಸಂರಕ್ಷಣೆಯ ವಿವಿಧ ಹಂತಗಳು. ಜತೆಗೆ ರೂವಾರಿ ಪಿಡಿಒ ಶೋಭಾ

ಇದೀಗ ಕೆರೆ ಅಭಿವೃದ್ಧಿ ಜತೆಗೆ ಪುರಾತನ ಕಾಲದ ಕಲ್ಯಾಣಿ ಪತ್ತೆಯಾಗಿರುವುದು ಸಂತಸ ತಂದಿದೆ. ನೂರಾರು ವರ್ಷಗಳ ಹಿಂದಿನ ಕೊಂಡಿಯೊಂದನ್ನು ಮತ್ತೆ ಪತ್ತೆ ಹಚ್ಚಿರುವುದು ಸಾರ್ಥಕತೆ ಮೂಡಿಸಿದೆ. ಎಲ್ಲರ ಪರಿಶ್ರಮದಿಂದ ಕಳೆದು ಹೋಗಿದ್ದ ಒಂದು ಸುಂದರ ಕಲ್ಯಾಣಿ ಮತ್ತೆ ಸಿಕ್ಕಿದೆ. ಪ್ರತೀ ಹಂತದಲ್ಲೂ ಪ್ರೊತ್ಸಾಹಿಸಿ ನನಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾ ದಿನೇಶ್ ಹೇಳಿದರು.

key words : Mysore-nagavala-PDO-shoba.rani-kalyani-found-lake-restoration-Karnataka

ENGLISH SUMMARY…

400-year-old pond discovered in Mysuru
Mysuru, October 23, 2021 (www.justkannada.in): A pond said to be 400-year-old has been discovered in Mysuru. The pond has been discovered, as a result of the curiosity of a Panchayat Development Officer (PDO), and her enthusiasm.
The pond is located at Nagavaala, on the outskirts of Mysuru. Not only that, the pond has been restored and filled with water due to the efforts of PDO Shobha Dinesh.
Speaking to Justkannada.in, PDO Shobha said, “I had visited the 25-acre tank near Nagavaala, along with Panchayat President C. Narendra. During our visit, Nagendra had told me that there was a pond near the tank when he was a young boy. He had informed that it was an ancient pond, and also recalled his childhood days when the people of the surrounding areas used to draw water from the pond for household use. I felt very excited to know more about the pond. Luckily, the survey of this tank was included under the ‘Village Drinking Water Scheme.’ There was also an opportunity of removing silt from the tank and develop it under the MGNREGA program. Hence, I discussed this with the Panchayat leaders and prepared a plan at an estimated cost of Rs. 9 lakh. While removing silt and cleaning the tank required Rs. 3 lakh, construction of a wall around the pond required Rs. 3 lakh and Rs. 3 lakh for fencing.”

ಕಲ್ಯಾಣಿ ಪತ್ತೆ ಹಾಗೂ ಸಂರಕ್ಷಣೆಯ ವಿವಿಧ ಹಂತಗಳು. ಜತೆಗೆ ರೂವಾರಿ ಪಿಡಿಒ ಶೋಭಾ

“The works commenced as per the project. Initially, the works were moving at a snail’s pace. Once we found the marks on the pond, we were all excited. Soon rainy season arrived and the pond filled with water. Also, water started oozing out of the pond triggering our enthusiasm. Thus, the project was completed,” she explained.
“The people are very happy that the pond is restored, along with the tank. We are satisfied that we have been successful in discovering an ancient water resource and restoring it. It has been possible with the efforts of all. I wish to extend my heartfelt thanks to all those who encouraged me and supported me throughout,” said PDO Shobha Dinesh.
Keywords: Nagavaala/ Mysuru/ 400-year-old pond/ discovered/ PDO/ Shobha Dinesh