ಮೈಸೂರು,ಫೆ,19,2020(www.justkannada.in): ಮೈಸೂರು ನಗರದ ಹೃದಯ ಭಾಗದಲ್ಲಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ಉಂಟಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನ ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ನಾಲ್ವಡಿ ನೆನಪಿನಾರ್ಥವಾಗಿ ಸರ್ ಎಂ ವಿಶ್ವೇಶ್ವರಯ್ಯ ಅವರು ಉದ್ಘಾಟಿಸಿದ್ದರು. ಆದರೆ ಇದೀಗ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಉಂಟಾಗಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಪ್ರತಿಮೆ ಸರಿಪಡಿಸುವಂತೆ ಮನವಿ ಮಾಡಿದ್ರು ಪ್ರಯೋಜನ ಇಲ್ಲ. ಹೀಗೆ ನಿರ್ಲಕ್ಷ್ಯ ಮಾಡಿದ್ರೆ ಪ್ರತಿಮೆ ಮುರಿದು ಬೀಳುವ ಸಾಧ್ಯತೆ ಇದೆ.
ಇನ್ನು ಪ್ರತಿಮೆ ಬಿರುಕು ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ, ಪ್ರತಿಮೆ ಬಿರುಕು ಬಿಟ್ಟಿರುವ ವಿಚಾರ ಈಗ ನನ್ನ ಗಮನಕ್ಕೆ ಬಂದಿದೆ. ಮೊನ್ನೆಯಷ್ಟೇ ಹೆರಿಟೇಜ್ ಕಮಿಟಿಯೊಂದಿಗೆ ಸಭೆ ನಡೆಸಿದ್ದೇನೆ. ದೊಡ್ಡಗಡಿಯಾರದಲ್ಲೂ ಕೂಡಾ ಸಂರಕ್ಷಣಾ ಕಾರ್ಯದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವಿಚಾರವನ್ನೂ ಕೂಡಾ ತಜ್ಞರ ಜೊತೆ ಚರ್ಚೆ ಮಾಡಿ ಸಂರಕ್ಷಣೆಗೆ ಗಮನ ಹರಿಸುತ್ತೇವೆ. ಹಣ ಎಷ್ಟು ಖರ್ಚಾದ್ರೂ ಪರವಾಗಿಲ್ಲ ಪುರಾತತ್ವ ಪ್ರತಿಮೆಗಳನ್ನು ಉಳಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.
Key words: mysore- Nalwadi Krishnaraja Wodeyar -statue – crack