ಮೈಸೂರು, ಏ.21, 2020: (www.justkannada.in news) ನಾವು ಹಾಗೂ ನಮ್ಮ ಸರ್ಕಾರ ಇಡೀ ನಂಜನಗೂಡು ಜನತೆ ಪರವಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜಿಲ್ಲಾಪಂಚಾಯಿತಿ ಸಭಾಗಂಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ಕೆಲವು ಜಿಲ್ಲೆಗಳಲ್ಲಿ ಒಂದೇ ಒಂದು ಪಾಸಿಟೀವ್ ಕೇಸ್ ಗಳಿಲ್ಲ. ಆದರೂ ಅವರನ್ನೂ ಲಾಕ್ ಡೌನ್ ಗೆ ಒಳಪಡಿಸಲಾಗಿದೆ. ಹೀಗಾಗಿ ನಾವು ಹಾಗೂ ನಮ್ಮ ಸರ್ಕಾರ ಇಡೀ ನಂಜನಗೂಡು ಜನತೆ ಪರವಾಗಿದ್ದೇವೆ ಎಂದು ನಂಜನಗೂಡು ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಈಗಾಗಲೇ 84 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 24 ಮಂದಿ ಹೋಂ ಕ್ವಾರಂಟೇನ್ ನಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 60 ಮಂದಿಯಲ್ಲಿ ಸೋಂಕು ಇನ್ನೂ ಇದ್ದು, ಅವರಲ್ಲಿ ಇಬ್ಬರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಇದುವರೆಗೂ 2289 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ.
ಇನ್ನು ಜ್ಯೂಬ್ಲಿಯೆಂಟ್ ನಲ್ಲಿ 1552 ಒಟ್ಟು ನೌಕರರಲ್ಲಿ ಬಹುತೇಕ ಎಲ್ಲರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕೆಲವರ ರಿಪೋರ್ಟ್ (ಪರೀಕ್ಷಾ ವರದಿ) ಮಾತ್ರ ಬರಬೇಕಿದ್ದು, ನಾಳೆಯೊಳಗೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಬಾವಲಿ ಚೆಕ್ ಪೋಸ್ಟ್ ಬಳಿ ವಾಹನಗಳ ಸಂಚಾರ ಹೆಚ್ಚಿದೆ. ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರ ಗಮನಕ್ಕೆ ತಂದಾಗ, ಶೀಘ್ರವಾಗಿ ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಶಾಸಕರಾದ ಎಸ್.ಎ.ರಾಮದಾಸ್, ಅಶ್ವಿನ್ ಕುಮಾರ್, ನಾಗೇಂದ್ರ, ಹರ್ಷವರ್ಧನ್ , ನಿರಂಜನ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮೇಯರ್ ಉಪಸ್ಥಿತರಿದ್ದರು
key words : mysore-nanjanagud-covid-karnataka