ಮೈಸೂರು, ಮೇ 15, 2020 : (www.justkannada.in news ) ನಂಜನಗೂಡು ಪಟ್ಟಣವನ್ನು ಕ್ಲಸ್ಟರ್ ಕಂಟೈನ್ಮೆಂಟ್ ಘಟಕದಿಂದ ತೆರವುಗೊಳಿಸಿ ಆದೇಶಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಕ್ಲಸ್ಟರ್ ಕಂಟೈನ್ಮೆಂಟ್ ಘಟಕದಲ್ಲಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯಕ್ಕೆ ತೆರಳಲು ಸರ್ಕಾರ ಅಥವ ಖಾಸಗಿ ಸಂಸ್ಥೆಯ ಗುರುತಿನ ಚೀಟಿ ಇರಬೇಕು. ಮಾರ್ಚ್ 26ರಿಂದ ಕ್ಲಸ್ಟರ್ ಕಂಟೈನ್ಮೆಂಟ್ ಘಟಕವಾಗಿದ್ದ ನಂಜನಗೂಡು ಪಟ್ಟಣಕ್ಕೆ ಈಗ ರಿಲೀಫ್.
ಈ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಈ ಎಲ್ಲಾ ಚಟುವಟಿಕೆಗೂ ಅವಕಾಶ :
ದ್ವಿಚಕ್ರ ವಾಹನದಲ್ಲಿ ಓರ್ವ ಓಡಾಡಬಹುದು., ನಾಲ್ಕು ಚಕ್ರ ವಾಹನದಲ್ಲಿ 2 ಓಡಾಡುವ ಅವಕಾಶ. ನಂಜನಗೂಡು ಎಲ್ಲ ಕೈಗಾರಿಗಾ ಚಟುವಟಿಕೆಗೆ ಅವಕಾಶ. ನಂಜನಗೂಡು ಪಟ್ಟಣದಲ್ಲಿರುವ ಕಾರ್ಮಿಕರನ್ನ ಬಳಸಿಕೊಂಡು ಕಟ್ಟಡ ಕಾಮಗಾರಿ ಮಾಡಬಹುದು. ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗತ್ಯ ಸೇವೆ ವಸ್ತುಗಳನ್ನ ಮಾರಾಟಕ್ಕೆ ಅವಕಾಶ. ನಂಜನಗೂಡು ಪಟ್ಟಣದಲ್ಲಿ ಅಗತ್ಯವಸ್ತುಗಳ ಮಾರಾಟಕ್ಕೆ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಅವಕಾಶ. ಕಬ್ಬಿಣ, ಹಾರ್ಡ್‌ವೇರ್,ಸಿಮೇಂಟ್ ಹಾಗೂ ಕಟ್ಟಡ ಕಾಮಗಾರಿಗೆ ಬೇಕಾದ ಅಂಗಡಿ ತೆರೆಯಲು ಅವಕಾಶ.
ಈ ಚಟುವಟಿಕೆಗಳು ನಿರ್ಬಂಧಿಸಲಾಗಿದೆ :
ಬಟ್ಟೆ, ಚಿನ್ನಭರಣ,ಪಾದರಕ್ಷೆಗಳ ಅಂಗಡಿಗೆ ಅವಕಾಶ ಇಲ್ಲ. ಮಾಲ್, ಚಿತ್ರಮಂದಿರ, ಆಟೋ, ಟ್ಯಾಕ್ಸಿಗೆ ಅವಕಾಶ ಇಲ್ಲ.
——————————-justkannada—————————newsportal——————
key words : mysore-nanjanagudu-covid-corona-releef-dc-zone