ಮೈಸೂರಿನಲ್ಲಿ ದುಷ್ಕರ್ಮಿಗಳಿಂದ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಬೆಂಕಿ : ಸಚಿವ ಸುರೇಶ್ ಕುಮಾರ್ ಅವರಿಂದ ಸಾಂತ್ವನ 

ಮೈಸೂರು,ಏಪ್ರಿಲ್,10,2021(www.justkannada.in) : ರಾಜೀವ್ ನಗರದ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ನಿನ್ನೆ ಬೆಂಕಿ ಬಿದ್ದು, 11 ಸಾವಿರ ಪುಸ್ತಕಗಳು ಭಸ್ಮವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೈಯದ್ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.Sanskrit Vivia,8th event,30 people,Ph.D,43graduates,M.Phil,Awarded 

ಈ ಬಗ್ಗೆ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ತಮಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲಿಯೇ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ಸೈಯದ್ ಇಸಾಕ್ ಅವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದೆ. ಸೈಯದ್ ಇಸಾಕ್ ಅವರು ಕಳೆದ ಅನೇಕ ವರ್ಷಗಳಿಂದ ಪುಸ್ತಕಗಳ ಸಂಗ್ರಹ ಮಾಡಿ ವಿನೂತನ ಗ್ರಂಥಾಲಯದ ಮೂಲಕ  ಬೇರೆಯವರಿಗೆ ಕನ್ನಡ ಓದಲು ಕನ್ನಡ ಕಲಿಸಲು ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.

ಪ್ರತಿ ದಿನ 100-150 ಜನ ಇದರಿಂದ ಲಾಭ ಪಡೆಯುತ್ತಿದ್ದರು. ಅವರ ಈ ವಿನೂತನ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿಹಾಕಿ ಸುಮಾರು 11 ಸಾವಿರ ಪುಸ್ತಕಗಳನ್ನು ಭಸ್ಮ ಮಾಡಿದ್ದಾರೆ. ಇದರಲ್ಲಿ ಸುಮಾರು 3000 ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ. ಅವರ ಬಳಿ ಇದ್ದ ಪುಸ್ತಕಗಳ ಪೈಕಿ ಶೇಕಡ 85 ರಷ್ಟು ಪುಸ್ತಕಗಳು ಕನ್ನಡ ಭಾಷೆಯಲ್ಲಿ ಇದ್ದವೆಂದು ತಿಳಿದು ಬಂದಿದೆ. ಅವರ ಅನೇಕ ವರ್ಷಗಳ ಈ ಸಂಗ್ರಹಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎಂದು ಬೇಸರವ್ಯಕ್ಯಪಡಿಸಿದ್ದಾರೆ.Mysore-outlaws-Syed Isaac-library-Fire-Minister-Suresh Kumar-them-Comfort

ಸೈಯದ್ ಇಸಾಕ್ ನಾನಂತೂ ಓದಿಲ್ಲ ಬೇರೆಯವರನ್ನು ಓದಿಸಬೇಕು ಎಂಬ ಉದ್ದೇಶ ನನ್ನದು. ಆದರೆ, ನನ್ನ ಎಲ್ಲಾ ಕಾರ್ಯಕ್ಕೆ ಇಂದು ಬೆಂಕಿ ಇಡಲಾಗಿದೆ” ಎಂದು ಬಿಕ್ಕಳಿಸುತ್ತಾ ಹೇಳಿದರು. ಅವರಿಗೆ ಅಗತ್ಯ ನೆರವು, ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾನು ಅವರಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲಿಯೇ ಮೈಸೂರಿನಲ್ಲಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದೇನೆ ಎಂದು ವಿವರಿಸಿದ್ದಾರೆ.

 

ಸೈಯದ್ ಅವರು ನಗರಪಾಲಿಕೆ ಜಾಗದಲ್ಲಿ ವೈಯಕ್ತಿವಾಗಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿತ್ತು. ಸೈಯದ್ ಅವರಿಗೆ ವಿಷಯ ತಿಳಿದು ಸ್ಥಳಕ್ಕೆ ಬರುವ ವೇಳೆಗೆ ಶೇ.95ರಷ್ಟು ಪುಸ್ತಕಗಳು ಸುಟ್ಟು ಹೋಗಿದ್ದವು. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ ವಿರೋಧಿ ಹಾಗೂ ಕಿಡಿಗೇಡಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ಸೈಯದ್ ಆರೋಪಿಸಿದ್ದರು. ಗ್ರಂಥಾಲಯದ ವಿಚಾರವಾಗಿ ನನ್ನ ಮೇಲೆ ನಾಲ್ಕು ಬಾರಿ ದಾಳಿ ನಡೆದಿತ್ತು ಎಂದು ಹೇಳಿದ್ದರು. 2011 ರಲ್ಲಿ ಸಣ್ಣ ಗುಡಿಸಲಿನಲ್ಲಿ ಗ್ರಂಥಾಲಯ ಆರಂಭಿಸಿದ್ದರು.

Mysore-outlaws-Syed Isaac-library-Fire-Minister-Suresh Kumar-them-Comfort

ಗ್ರಂಥಾಲಯಕ್ಕೊಂದು ಸೂರು ದೊರೆಯುವ ತನಕ ಗುಡಿಸಲಿನಲ್ಲೇ ಮಲಗುತ್ತಿದ್ದ ಸೈಯದ್ ಇಸಾಕ್ ಅವರು ಗ್ರಂಥಾಲಯಕ್ಕೆ ಸೂರು ಸಿಕ್ಕ ಮೇಲೆ ಮನೆಯಲ್ಲಿ ಮಲಗುತ್ತಿದ್ದು. ಇದನ್ನು ಗಮನಿಸಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ಸೈಯದ್ ತಿಳಿಸಿದ್ದಾರೆ.

key words : Mysore-outlaws-Syed Isaac-library-Fire-Minister-Suresh Kumar-them-Comfort