MYSORE PALACE: ಡಿ. ೩೧ ರಂದು ಆಯೋಜಿಸಿದ್ದ ಪೊಲೀಸ್‌ ಬ್ಯಾಂಡ್‌ , ಬಾಣ-ಬಿರಿಸು ಪ್ರದರ್ಶನ ರದ್ದು

Mysore Palace: Police Band, crackers show performance scheduled for 31st canceled Mysore Palace Board Deputy Director Subramanya told “Just Kannada” that this decision was taken as the state is in mourning following the death of former Prime Minister Manmohan Singh.

 

ಮೈಸೂರು, ಡಿ.೨೭, ೨೦೨೪: ಇಂದು ಮತ್ತು ನಾಳೆ ಮೈಸೂರು ಅರಮನೆಗೆ ದೀಪಾಲಂಕಾರ ಇರುವುದಿಲ್ಲ. ಜತೆಗೆ ವರ್ಷಾಂತ್ಯದಂದು ಹೊಸ ವರ್ಷದ ಸಂಭ್ರಮಾಚರಣೆಗೆಂದು ಉದ್ದೇಶಿಸಿದ್ದ ಬಾಣಬಿರಿಸುಗಳ  ( ಹಸಿರು ಪಟಾಕಿ)  ಪ್ರದರ್ಶನ ರದ್ದುಪಡಿಸಲಾಗಿದೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು “ ಜಸ್ಟ್‌ ಕನ್ನಡ” ಗೆ ತಿಳಿಸಿದರು.

ಕಳೆದ ವಾರದಿಂದ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಇದು ಎಂದಿನಂತೆ ರಾತ್ರಿ ೯ ಗಂಟೆಯ ತನಕ ನಡೆಯಲಿದೆ. ಆದರೆ ಇಂದು ಮತ್ತು ನಾಳೆ ದೀಪಾಲಂಕಾರವನ್ನು ಮಾತ್ರ ರದ್ದುಪಡಿಸಲಾಗಿದೆ.

ಜತೆಗೆ ಡಿ. ೩೧ ರ ರಾತ್ರಿ ೧೧ ರಿಂದ ೧೨ ರ ತನಕ ಆಯೋಜಿಸಿದ್ದ ಪೊಲೀಸ್‌ ಬ್ಯಾಂಡ್‌ ಹಾಗೂ ೧೨ ರಿಂದ ೧೨.೧೫ ರ ತನಕ ಆಯೋಜಿಸಿದ್ದ ಹಸಿರು ಪಟಾಕಿ ಪ್ರದರ್ಶನವನ್ನು ಶೋಕಾಚರಣೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಆದರೆ ಅಂದು ಫ್ಲವರ್‌ ಶೋ ಮಾತ್ರ ಎಂದಿನಂತೆ ನಡೆಯಲಿದೆ.

key words:  Mysore Palace, Police Band, crackers show, performance scheduled, for 31st, canceled

SUMMARY:

Mysore Palace: Police Band, crackers show performance scheduled for 31st canceled

Mysore Palace Board Deputy Director Subramanya told “Just Kannada” that this decision was taken as the state is in mourning following the death of former Prime Minister Manmohan Singh.