MYSORE PALACE BOARD: ಜಾತಿ ನಿಂಧನೆ ಪ್ರಕರಣ,  ಹೈಕೋರ್ಟ್ ತಡೆಯಾಜ್ಞೆ

The Karnataka High Court on Monday stayed atrocity complaint filed against Mysore Palace Board Deputy Director T S Subramanya.

 

ಮೈಸೂರು, ಮಾ.೦೩,೨೦೨೫: ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ವಿರುದ್ಧ ದಾಖಲಾಗಿದ್ದ ಜಾತಿ ನಿಂಧನೆ ದೂರು ಪ್ರಕರಣಕ್ಕೆ ರಾಜ್ಯ ಹೈಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್‌ ನ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರಿದ್ದ ಏಕಪೀಠ ಸೋಮವಾರ ಈ ತಡೆಯಾಜ್ಞೆ ನೀಡಿದೆ. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ಪರವಾಗಿ ಸಿಬಿಐ ವಕೀಲ ಪ್ರಸನ್ನ ಕುಮಾರ್‌ ಹಾಜರಾಗಿದ್ದರು.

ಜಿಲ್ಲಾ ಸಿವಿಲ್‌ ನ್ಯಾಯಾಲಯದಲ್ಲಿ ಈಗಾಗಲೇ, ಅರಮನೆ ಮಂಡಳಿಗೆ ಸಂಬಂಧಿಸಿದಂತೆ ಯಾವುದೇ  ಸುದ್ಧಿ ಅಥವಾ ವರದಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ. ಆದಾಗ್ಯೂ, ಸ್ಥಳೀಯ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮನ್‌ ಅರಮನೆ ಮಂಡಳಿಗೆ ಅತಿಕ್ರಮ ಪ್ರವೇಶಿಸಿದ್ದರು. ಕೋರ್ಟ್‌ ನಿರ್ಬಂಧಕಾಜ್ಞೆ ಇರುವ ಬಗ್ಗೆ ಹೇಳಿದರು ಅದನ್ನು ಉಲ್ಲಂಘಿಸಿದಂತೆ ವರ್ತಿಸಿದರು. ಆ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು.  ಬಳಿಕ ತಾವೇ ಪೊಲೀಸ್‌ ಠಾಣೆಗೆ ತೆರಳಿ ಸುಳ್ಳು ಜಾತಿ ನಿಂಧನೆ ಪ್ರಕರಣ ದಾಖಲಿಸಿದರು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ಪರ ವಕೀಲರು ಕೋರ್ಟ್‌ ಗೆ ಮಾಹಿತಿ ನೀಡಿದರು.

ಈ ಘಟನೆ ಬಳಿಕ  ಅರಮನೆ ಮಂಡಳಿ ಸಿಬ್ಬಂದಿ, ದೇವರಾಜ ಠಾಣೆ ಪೊಲೀಸ್‌ ಠಾಣೆಗೆ ತೆರಳಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ವರದಿಗಾರ ಕೆಂಡಗಣ್ಣ ಹಾಗೂ ಕ್ಯಾಮೆರಾಮನ್‌ ರವಿ ಅವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದನ್ನು ವಕೀಲ ಪ್ರಸನ್ನ ಕುಮಾರ್‌  ಕೋರ್ಟ್‌ ಗೆ ವಿವರಿಸಿದರು.

ಆ ಪದ ಬಳಕೆಯೇ ಗೊತ್ತಿಲ್ಲ:

“ಜಾತಿ ನಿಂಧನೆ” ಪ್ರಕರಣದ ದೂರು ಎದುರಿಸುತ್ತಿದ್ದ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಜಸ್ಟ್‌ ಕನ್ನಡ ಜತೆ ಮಾತನಾಡಿ, ನನಗೆ ಅ ಪದ ಬಳಕೆಯೇ ಗೊತ್ತಿಲ್ಲ. ನನ್ನ ವಿರುದ್ಧ ಎಫ್.ಐ.ಆರ್.‌ ಮಾಡಿಸಲೇ ಬೇಕು ಎಂಬ ಸಲುವಾಗಿ ಸುಳ್ಳು ದೂರು ನೀಡಿದರು. ಈ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೀಗ ಹೈಕೋರ್ಟ್‌ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವುದು ಸಮಧಾನ ತಂದಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

KEY WORDS: The Karnataka High Court, atrocity complaint, Mysore Palace Board, Deputy Director T S Subramanya.

The Karnataka High Court on Monday stayed atrocity complaint filed against Mysore Palace Board Deputy Director T S Subramanya.