MYSORE PALACE BOARD : ಡಿಡಿ ವಿರುದ್ದ ಸುಳ್ಳು ಆರೋಪದ ಪ್ರಚಾರಕ್ಕೆ ಕೋರ್ಟ್‌ ತಡೆಯಾಜ್ಞೆ.

COURT STAYS PROPAGATION OF FALSE ALLEGATIONS AGAINST MYSORE PALACE BOARD DEPUTY DIRECTOR.

 

ಮೈಸೂರು, ಜು,21,2024: (www.justkannada.in news) ಅರಮನೆ ಆಡಳಿತ ಮಂಡಳಿ ಹಾಗೂ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ ಅವರ ವಿರುದ್ದದ ಮಾನಹಾನಿಕಾರಕ ಹೇಳಿಕೆ ಪ್ರಕಟಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ.

ಅರಮನೆ ಮಂಡಳಿ ಉಪ ನಿರ್ದೇಶಕರ ವಿರುದ್ಧ ಇಲ್ಲದ ಆರೋಪ ಆಪಾದನೆ ಮಾಡಿ ಮಾನಹಾನಿಕಾರಕ ಹೇಳಿಕೆ ಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಟಿ ಎಸ್ ಸುಬ್ರಮಣ್ಯ ಪರ ವಕೀಲ್ ಎಸ್ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಮೈಸೂರು ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ಮೊಕದಮ್ಮೆ ದಾಖಲಿಸಲಾಗಿತ್ತು. ನ್ಯಾಯಾಲಯ ಈ ರೀತಿಯ ಪ್ರಚಾರ ಪಡಿಸುವುದಕ್ಕೆ ತಡೆಯಾಜ್ಞೆ ಆದೇಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪತ್ರಿಕೆ ದೃಶ್ಯ ಮಾಧ್ಯಮ ಅಥವಾ ಯಾವುದೇ ವ್ಯಕ್ತಿ ಅರಮನೆ ಮಂಡಳಿ ಅಥವಾ ನಿರ್ದೇಶಕರ ವಿರುದ್ದ ಪ್ರಚಾರ ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ವಕೀಲ ಎಸ್ ಲೋಕೇಶ್ ತಿಳಿಸಿದ್ದಾರೆ.

key words: COURT STAYS, PROPAGATION OF, FALSE ALLEGATIONS, AGAINST, MYSORE PALACE BOARD, DEPUTY DIRECTOR.

SUMMARY:

MYSORE PALACE BOARD: COURT STAYS PROPAGATION OF FALSE ALLEGATIONS AGAINST DD. Advocate S Lokesh, appearing for T S Subramanya, said that the allegations levelled against the Deputy Director of the Palace Board are baseless.