ಮೈಸೂರು ,ಸೆಪ್ಟಂಬರ್,21, 2024 (www.justkannada.in): ನಿನ್ನೆ ಮೈಸೂರಿನ ಅರಮನೆ ಆವರಣದಲ್ಲಿ ಕಾದಾಟಕ್ಕಿಳಿದಿದ್ದ ದಸರಾ ಗಜಪಡೆಯ ಕಂಜನ್ ಹಾಗೂ ಧನಂಜಯ ಆನೆ ಇದೀಗ ಬೆಳಗ್ಗೆ ತಾಲೀಮು ಮುಗಿಸಿ ರಿಲ್ಯಾಕ್ಸ್ ಮಾಡುತ್ತಿವೆ.
ನಿನ್ನೆ ರಾತ್ರಿ ಧನಂಜಯ ಮತ್ತು ಕಂಜನ್ ಆನೆಗಳು ಗಲಾಟೆಗಿಳಿದು ಕೆಲ ಕಾಲ ಆತಂಕ ಸೃಷ್ಟಿಸಿದ್ದವು. ಆಹಾರ ಕೊಡುವ ಸಂದರ್ಭದಲ್ಲಿ ಕಂಜನ್ ಆನೆಯನ್ನು ಧನಂಜಯ ಆನೆ ಅಟ್ಟಾಡಿಸಿತ್ತು. ಇದರಿಂದ ಬೆದರಿದ ಕಂಜನ್ ಬ್ಯಾರಿಕೇಡ್ ತಳ್ಳಿ ರಸ್ತೆಗೆ ಹೋಗಿತ್ತು. ಈ ವೇಳೆ ಧನಂಜಯ ಅನೆ ಮೇಲಿದ್ದ ಮಾವುತನ ಸಮಯಪ್ರಜ್ಞೆಯಿಂದ ಧನಂಜಯನನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಉಭಯ ಆನೆಗಳೂ ಬೆಳಗ್ಗೆ ತಾಲೀಮು ಮುಗಿಸಿ ರಿಲ್ಯಾಕ್ಸ್ ಮಾಡುತ್ತಿವೆ.
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲು ಸೂಚನೆ- ಸಚಿವ ಮಹದೇವಪ್ಪ
ನಿನ್ನೆ ಧನಂಜಯ, ಕಂಜನ್ ಆನಗೆಳ ಜಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಹಳ್ಳಿಗಳಲ್ಲಿ ಎರಡು ಹೋರಿಗಳು ಜಗಳ ಆಡುವ ಹಾಗೆ ಈ ಆನೆಗಳು ಜಗಳ ಮಾಡಿಕೊಂಡಿವೆ. ಸದ್ಯಕ್ಕೆ ಅದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮಾವುತರ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಆಗಿಲ್ಲ. ಕೆಲವು ಬಾರಿ ಆನೆಗಳು ಸಾಕಿದ ಮಾವುತರ ಮಾತನ್ನ ಕೇಳದೆ ತಿರುಗಿ ಬೀಳುತ್ತವೆ. ಮುಂದಿನ ದಿನಗಳಲ್ಲಿ ಹಾಗೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
Key words: mysore, palace, Dhananjaya, Kanjan, elephant, relax mood