ಅರಮನೆಯ ಚಿನ್ನದ ಅಂಬಾರಿ ವೀಕ್ಷಣೆಗೆ ಬ್ರೇಕ್

ಮೈಸೂರು, ಡಿಸೆಂಬರ್​,6,2024 (www.justkannada.in): ಮೈಸೂರು ದಸರಾ ವೇಳೆ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಸಾಗುವ ಚಿನ್ನದ ಅಂಬಾರಿಯನ್ನ ಲಕ್ಷಾಂತರ ಜನರು ನೋಡಿ ಕಣ್ತುಂಬಿಕೊಳ್ಳುತ್ತಾರೆ ಈ ಮಧ್ಯೆ ಮೈಸೂರು ಅರಮನೆಗೂ ಪ್ರವಾಸಿಗರು ಭೇಟಿ ನೀಡಿ ಚಿನ್ನದ ಅಂಬಾರಿ ವೀಕ್ಷಣೆ ಮಾಡುತ್ತಾರೆ. ಆದರೆ ಇದೀಗ ಅಂಬಾರಿ ವೀಕ್ಷಣೆಗೆ ಕೆಲ ಕಾಲ ಬ್ರೇಕ್ ಬಿದ್ದಿದೆ.

ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಚಿನ್ನದ ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ‌, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅಲಭ್ಯವಾಗಲಿದೆ.

ಅರಮನೆ ಮತ್ತು ಅಂಬಾರಿಯನ್ನು ವೀಕ್ಷಿಸಲು ನಿತ್ಯ ಸಾವಿರಾರು ಜನರು ಮೈಸೂರಿಗೆ ತೆರಳುತ್ತಾರೆ. ಕೆಲದಿನಗಳ ಕಾಲ ವೀಕ್ಷಣೆಗೆ ಲಭ್ಯವಿಲ್ಲದ ಕಾರಣ ಪ್ರವಾಸಿಗರಲ್ಲಿ ನಿರಾಸೆ ಉಂಟಾಗಲಿದೆ.

Key words: mysore palace, Break , Gold Ambari