ರಾಜವಂಶದವರ ಕಡೆಗಣನೆ : ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ, ಪ್ರತಿಭಟನೆ ಬಳಿಕ ಸಂಸದರ ಸ್ಪಷ್ಟನೆ.

Mysore-palace-yoga-wodeyar-protest-prathap-simha

 

ಮೈಸೂರು, ಜೂ.14, 2022 : (www.justkannada.in news ) ವಿಶ್ವಯೋಗದಿನದ ವೇದಿಕೆಯಲ್ಲಿ ಯದುವಂಶದವರಿಗೆ ಆಹ್ವಾನ ನೀಡದಿರುವ ಸರಕಾರದ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆ ಬಳಿಕ ಎಚ್ಚೆತ್ತ ಮೈಸೂರು ಸಂಸದ ಪ್ರತಾಪ್ ಸಿಂಹರಿಂದ ಸ್ಪಷ್ಟನೆ.

ನಾನು ಹೇಳಿರುವುದು ಜನಪ್ರತಿನಿಧಿಗಳ ವಿಚಾರ. ಗಣ್ಯರ ಪಟ್ಟಿ ಇನ್ನು ಸಿದ್ದವಾಗುತ್ತಿದೆ. ನಮ್ಮ ಮೈಸೂರು ಮಹಾರಾಜರ ಕೊಡುಗೆ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ. ಮಹಾರಾಜರು ರಾಜಮಾತೆ ಯತಿಗಳು ಮೈಸೂರಿನಲ್ಲಿ ಇದ್ದಾರೆ. ಗಣ್ಯರ ಪಟ್ಟಿ ಇನ್ನು ಅಂತಿಮವಾಗಿಲ್ಲ. ನಾನು ಅಂದು ಸಂದರ್ಭಕ್ಕೆ ಹೇಳಿದ್ದು. ವೇದಿಕೆಯ ಜನಪ್ರತಿನಿಧಿಗಳ ಬಗ್ಗೆ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮೈಸೂರು ಮಹಾರಾಜರನ್ನು ಬಿಟ್ಟು ಕಾರ್ಯಕ್ರಮ ಎಂಬುದು ಗಾಳಿ ಸುದ್ದಿ. ಇದಕ್ಕೆ ಯಾರು ಕಿವಿ ಕೊಡಬೇಡಿ. ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಸ್ಪಷ್ಟನೆ.

ಪ್ರತಿಭಟನೆ ಕಾರಣ:

ಈ ಮೊದಲು ಮೈಸೂರು ಅರಮನೆ ಆವರಣದಲ್ಲಿ ಜೂ. 21 ರಂದು ಆಯೋಜಿಸಿರುವ ಯೋಗ ಸಮಾರಂಭದ ವೇಧಿಕೆಯಲ್ಲಿ ಪ್ರಧಾನಿ ಮೋದಿ ಜತೆಗೆ ಐವರಿಗೆ ಮಾತ್ರ ಅವಕಾಶ. ಉಳಿದವರಿಗೆ ವೇದಿಕೆ ಮುಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಡೆಯರ್ ಅಭಿಮಾನಿಗಳ ಬಳಗ, ರಾಜವಂಶದವರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಜತೆಗೆ ನಗರ ಪಾಲಿಕೆ ಸದಸ್ಯ ಹಾಗೂ ಬಳಗದ ಮುಖಂಡ ಲೊಕೇಶ್ ವಿ.ಪಿಯಾ ನೇತೃತ್ವದಲ್ಲಿ ಒಡೆಯರ್ ಅಭಿಮಾನಿಗಳು ಇಂದು ಪ್ರತಿಭಟನೆ ನಡೆಸಿ ಸರಕಾರದ ನಡೆಯನ್ನು ಖಂಡಿಸಿದ್ದರು.

ರಾಜವಂಶದವರನ್ನು ಕಡೆಗಣಿಸುವ ಪ್ರವೃತ್ತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮ ದಿನದಂದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಇದು ಸಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ರಾಜವಂಶದವರನ್ನು ಕಡೆಗಣಿಸಿ ಅರಮನೆ ಆವರಣದಲ್ಲಿ ಸಮಾರಂಭ ನಡೆಸುವ ಸರಕಾರದ ನಡೆಗೆ ನೆಟಿಜನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬಹುದು.
ಇದೀಗ ಪ್ರತಿಭಟನೆ, ಸೋಷಿಯಲ್ ಮೀಡಿಯಾ ಅಭಿಯಾನದಿಂದ ಎಚ್ಚೆತ್ತ ಸಂಸದ ಪ್ರತಾಪ್ ಸಿಂಹ, ರಾಜವಂಶದವರನ್ನು ಕಡೆಗಣಿಸುವ ಉದ್ದೇಶವಿಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

key words : Mysore-palace-yoga-wodeyar-protest-prathap-simha