ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಮೈಸೂರು,ನವೆಂಬರ್,22,2024 (www.justkannada.in):  ಐದು ವರ್ಷವೂ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸದ್ಯಕ್ಕೆ ರಾಜ್ಯದಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ಏನು ಬೇಕಾದ್ರೂ ಹೇಳಲಿ  ವಿಜಯೇಂದ್ರ ಅವರು ಏನು ನಮ್ಮ ಪಕ್ಷದವರಾ? ನಮ್ಮ ಪಕ್ಷದ ತೀರ್ಮಾನ ಅವರಿಗೇನು ಗೊತ್ತು? ಎಂದು ಟಾಂಗ್ ಕೊಟ್ಟರು.

ನೀವು ಸಿಎಂ ಆಗ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ನಕ್ಕ ಪರಮೇಶ್ವರ್, ನನ್ನ ಯಾಕೆ ಕೀಟಲೆ ಮಾಡ್ತಿರಾ. ಸಿದ್ದರಾಮಯ್ಯ 5 ವರ್ಷ ಸಿಎಂ ಅಂತ ಹೇಳಿದ್ದೇನೆ . ನಾನು ಸಿಎಂ ಆಗುವ ಪ್ರಶ್ನೆ ಎಲ್ಲಿ ಬರತ್ತೆ? ನನೆಗ ಸಿಎಂ ಆಗುವ ಆಸೆ ಇಲ್ಲ ಎಂದರು.

ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ.

ರಾಜಕೀಯದಲ್ಲಿ ಯಾವಾಗ? ಎನಾಗತ್ತೋ ಎಂಬ ಹೇಳಿಕೆ  ಕುರಿತು ಸ್ಪಷ್ಟನೆ ನೀಡಿದ ಪರಮೇಶ್ವರ್,  ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸುಭದ್ರ ಆಡಳಿತ ನೀಡುತ್ತಿದ್ದಾರೆ ರಾಜ್ಯ ಕಾಂಗ್ರೆಸ್ ನಲ್ಲಿ ಅವಧಿ ಮುಗಿದ ಬಳಿಕ ಅಧ್ಯಕ್ಷರ ಬದಲಾವಣೆ. ಅಧ್ಯಕ್ಷರು ಬದಲಾದರೆ ಅಂತ ಈ ರೀತಿ ಹೇಳಿದೆ ಅಷ್ಟೇ. ನಾನು ಪಕ್ಷದ ವಿಚಾರವಾಗಿ ಬೇಗ ಕಟ್ಟಡ ಕಟ್ಟಿ ಅಂತ ಹೇಳಿದೆ ಅಷ್ಟೇ ಎಂದು ತಿಳಿಸಿದರು.

ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಪಕ್ಷದ ಅಧ್ಯಕ್ಷರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ . ಅದು ಅವರ ಅಧಿಕಾರ ಎಂದರು.

ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸದ್ಯಕ್ಕೆ ಎಲ್ಲಾ ಸಚಿವರ ರಿಪೋರ್ಟ್ ಕಾರ್ಡ್ ಕೇಳಿದ್ದಾರೆ. ನಾನೂ‌ ಕೂಡ ನನ್ನ ರಿಪೋರ್ಟ್ ಕಾರ್ಡ್ ನೀಡಿರುವೆ. ಯಾರನ್ನ ಉಳಿಸಿಕೊಳ್ಳಬೇಕು, ಮುಂದುವರಿಸಬೇಕು ಹೈಕಮಾಂಡ್ ತೀರ್ಮಾನಿಸಲಿದೆ. ಗುಲಾಂನಬಿ  ಅಜಾದ್ ಇದ್ದಾಗ ಕೂಡ ವರದಿ ನೀಡುತ್ತಿದ್ದೆವು. ಅದೇ ರೀತಿ ವರದಿ ಕೇಳಿದ್ದಾರಷ್ಟೆ ಎಂದರು.

Key words: Siddaramaiah, CM, next, five years – Home Minister, Dr. G. Parameshwar