ಮೈಸೂರು,ನವೆಂಬರ್,4,2024 (www.justkannada.in): ಪ್ರವಾಸೋದ್ಯಮ ಮಂತ್ರಾಲಯ, ಭಾರತ ಸರ್ಕಾರದ ವತಿಯಿಂದ ಮೈಸೂರಿನ ಐಬಿಸ್ ಸ್ಟೈಲ್ಸ್ ಹೋಟೆಲ್‌ನಲ್ಲಿ ಇಂದು ಮತ್ತು ನಾಳೆ ಹೋಟೆಲ್ ಸಿಬ್ಬಂದಿಗೆ “ಪರ್ಯಟನ್ ಮಿತ್ರ” ಮತ್ತು “ಪರ್ಯಟನ್ ದೀದಿ” ಕಾರ್ಯಕ್ರಮದ ಅಡಿಯಲ್ಲಿ ಆಯೋಜನೆ ಮಾಡಲಾಗಿರುವ ವಿಶೇಷ ಕೌಶಲ್ಯ ಪ್ರಮಾಣೀಕರಣ ತರಬೇತಿಗೆ ಚಾಲನೆ ನೀಡಲಾಯಿತು.
ಈ ತರಬೇತಿ ಕಾರ್ಯಕ್ರಮವು ಹೋಟೆಲ್ ಸಿಬ್ಬಂದಿಯ ಪ್ರತಿಭೆಯನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮದ ಸೇವಾ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ. ಕಾರ್ಯಕ್ರಮವನ್ನು ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ನಿರ್ದೇಶಕರಾದ ಡಿ. ವೆಂಕಟೇಶನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಎಂ.ಕೆ. ಕ.ಆ.ಸೇ. ಮತ್ತು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು.
ಈ ತರಬೇತಿ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ ಸ್ವಚ್ಛತೆ, ನಡವಳಿಕೆಯ ಕೌಶಲ್ಯ ಮತ್ತು ಭಾಷಾ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದು, ಉಚಿತವಾಗಿ ನೀಡಲಾಗುತ್ತಿದೆ.
Key words: mysore, Paryatan Mitra, Special, Skill Certification, Training, Program